ಭಾನುವಾರ, ಏಪ್ರಿಲ್ 18, 2021
33 °C

ಅಕ್ರಮ ಕಟ್ಟಡ, ಒತ್ತುವರಿ ತೆರವಿಗೆ ಅಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಿಹರ: `ಕೆಎಂಆರ್‌ಪಿ ಒಳಚರಂಡಿ ಕಾಮಗಾರಿಗೆ ಬಾಕಿ ಹಣ ಬಿಡುಗಡೆ. ಭಾರತ್ ಆಯಿಲ್‌ಮಿಲ್ ಕಾಂಪೌಂಡ್‌ನಲ್ಲಿರುವ ಶಿಥಿಲಗೊಂಡ ನಗರಸಭೆ ಮಳಿಗೆಗಳನ್ನು ತೆರವುಗೊಳಿಸುವುದು. ಇಂದಿರಾನಗರ ಪಾರ್ಕ್‌ನಲ್ಲಿರುವ ಅನಧಿಕೃತ ಕಟ್ಟಡಗಳ ತೆರವಿಗೆ ಸರ್ವಾನುಮತ, ದಿನವಹಿ ಸಂತೆ ಮತ್ತು ವಾರದ ಸಂತೆಯ ದರಗಳನ್ನು ಪರಿಷ್ಕರಣ ಹಾಗೂ ಮರು ಹರಾಜು. ವಾರದ ಸಂತೆಯನ್ನು ದೇವಸ್ಥಾನ ರಸ್ತೆಗೆ ಸ್ಥಳಾಂತರ.ಪತ್ರಕರ್ತರ ಸಂಘಕ್ಕೆ ನಿವೇಶನ. ನಗರ ವ್ಯಾಪ್ತಿ ಉದ್ಯಮಗಳ ಪರವಾನಗಿ ದರ ಪರಿಷ್ಕರಣೆ. ನಗರಸಭೆ ಅಧ್ಯಕ್ಷರಿಗೆ ಹೊಸ ವಾಹನ~-ಇವು, ನಗರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯ ಮುಖ್ಯಾಂಶಗಳು.

ನಗರದಲ್ಲಿ ಬಹುತೇಕ ವಾರ್ಡ್‌ಗಳಲ್ಲಿ ಚರಂಡಿಗಳು ಒತ್ತುವರಿ ಆಗಿವೆ. ಕೆಎಂಆರ್‌ಪಿ ಒಳಚರಂಡಿ ಯೋಜನೆ ಕಾಮಗಾರಿಗೆ ಬಾಕಿ ಹಣ ಬಿಡುಗಡೆ ಮಾಡುವ ಜತೆಗೆ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳುವಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಸೈಯದ್ ರೆಹಮಾನ್ ಆಗ್ರಹಿಸಿದರು.ಭಾರತ್ ಆಯಿಲ್‌ಮಿಲ್ ಕಾಂಪೌಂಡ್‌ನಲ್ಲಿರುವ ಶಿಥಿಲಗೊಂಡ ನಗರಸಭೆ ಮಳಿಗೆಗಳನ್ನು ಮೊದಲು ನಗರಸಭೆ ಸುಪರ್ದಿಗೆ ತೆಗೆದುಕೊಂಡು ನಂತರ ತೆರವು ಕಾರ್ಯ ನಡೆಸಿ ಎಂದು  ಎ. ವಾಮನಮೂರ್ತಿ ಸಲಹೆ ನೀಡಿದರು.

ದಿನವಹಿ ಸಂತೆಯನ್ನು ದೇವಸ್ಥಾನ ರಸ್ತೆಗೆ ಸ್ಥಳಾಂತರಗೊಳಿಸುವುದು ಸಾರ್ವಜನಿಕ ಹಿತದೃಷ್ಟಿಯಿಂದ ಒಳ್ಳೆಯದು ಎಂಬ ಡಿ. ಹೇಮಂತರಾಜ್ ಸಲಹೆಗೆ ಹಾಗೂ ದಿನವಹಿ ಸಂತೆ ಮತ್ತು ವಾರದ ಸಂತೆಯ ದರಗಳನ್ನು ಪರಿಷ್ಕರಿಸಿ ಮರು ಹರಾಜಿಗೆ ಸಭೆ ಅನುಮೋದನೆ ನೀಡಿತು.ನಗರ ವ್ಯಾಪ್ತಿ ಉದ್ಯಮಗಳ ಪರವಾನಗಿ ದರ ಪರಿಷ್ಕರಣೆ. ನಗರಸಭೆ ಅಧ್ಯಕ್ಷರಿಗೆ ಹೊಸ ವಾಹನ ಖರೀದಿಗೆ ಹಾಗೂ ಪತ್ರಕರ್ತರ ಸಂಘದ ಭವನ ನಿರ್ಮಾಣಕ್ಕೆ ನಿವೇಶನ ನೀಡಲು ಅನುಮೋದನೆ ದೊರೆಯಿತು.ಇಂದಿರಾನಗರದ ನಗರಸಭೆ ಉದ್ಯಾನದಲ್ಲಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಂತೆ ಈಗಾಗಲೇ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಅಧಿಕಾರಿಗಳು ಕೂಡಲೇ, ಈ ಆದೇಶ ಪಾಲಿಸಲಿದ್ದರೆ, ಅವರ ವಿರುದ್ಧ ಮೊಕದ್ದಮೆ ಹೂಡುತ್ತೇನೆ ಎಂದು ಕೆ. ಮರಿದೇವ ಎಚ್ಚರಿಸಿದರು.ನ್ಯಾಯಾಲಯದ ಆದೇಶಗಳನ್ನು ಸಾಮಾನ್ಯ ಸಭೆಗೆ ತರುವುದೇ ಬೇಡ. ಅವುಗಳ ಪಾಲನೆ ಮಾಡುವುದು ಅಧಿಕಾರಿಗಳ ಕರ್ತವ್ಯ ಎಂದು ಹೇಮಂತರಾಜ್ ಮತ್ತು ಎ. ವಾಮನಮೂರ್ತಿ ಸಲಹೆ ನೀಡಿದರು.ನಗರಸಭೆ ಉದ್ಯಾನದಲ್ಲಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಸಭೆ ಸರ್ವಾನುಮತದ ಅನುಮೋದನೆ ನೀಡಿತು. ಬೀಡಿ ಕಾರ್ಮಿಕರ ಕಾಲೊನಿ ವಸತಿ ಯೋಜನೆ ಅಕ್ರಮಗಳ ಬಗ್ಗೆ ಚರ್ಚೆ ನಡೆಸಲು ರಮೇಶ ಮೆಹರ‌್ವಾಡೆ ಹಾಗೂ ಸೈಯದ್ ರೆಹಮಾನ್ ಆಗ್ರಹಿಸಿದರು.ಅದಕ್ಕಾಗಿ ಶಾಸಕ ಬಿ.ಪಿ. ಹರೀಶ್ ಅವರ ಸಮ್ಮುಖದಲ್ಲಿ ವಿಶೇಷ ಸಭೆ ಕರೆಯುವುದಾಗಿ ಅಧ್ಯಕ್ಷ ವಿಶ್ವನಾಥ ಭೂತೆ ರೂಲಿಂಗ್ ನೀಡಿದರು.ಸಭೆಯಲ್ಲಿ ಶಾಸಕ ಬಿ.ಪಿ. ಹರೀಶ್, ನಗರಸಭೆ ಉಪಾಧ್ಯಕ್ಷೆ ಹೊನ್ನಮ್ಮ ಕೊಂಡಜ್ಜಿ, ಆಯುಕ್ತ ಎಂ.ಕೆ. ನಲವಡಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.