ಗುರುವಾರ , ಜನವರಿ 23, 2020
19 °C
ಸರ್ಕಾರಿ ಭೂ ಒತ್ತುವರಿ * ಅಧಿಕಾರಿಗಳು ಶಾಮೀಲು–ಆರೋಪ

ಅಕ್ರಮ ಖಾಸಗಿ ಬಡಾವಣೆ ನಿರ್ಮಾಣ ತಡೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನೇಕಲ್‌: ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿ ಖಾಸಗಿಯವರು ಬಡಾವಣೆ ಗಳನ್ನು ನಿರ್ಮಿಸುತ್ತಿದ್ದಾರೆ. ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು ಎಂದು ಪ್ರಜಾ ವಿಮೋಚನಾ ಚಳವಳಿ (ಸಮತಾ ವಾದ) ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಆನೇಕಲ್‌ ಕೃಷ್ಣಪ್ಪ ಒತ್ತಾಯಿಸಿದರು.ಅವರು ತಾಲ್ಲೂಕಿನ ಹುಲಿಮಂಗಲ ಗ್ರಾ.ಪಂ.ಮುಂಭಾಗದಲ್ಲಿ ಸಂಘಟನೆ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿ ಕೆಗೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು  ಮಾತನಾಡಿದರು. ಹಸಿರು ವಲಯದಲ್ಲಿದ್ದರೂ  ಜಮೀ ನುಗಳನ್ನು  ಪರಿವರ್ತನೆ ಮಾಡಲಾಗಿದೆ. ಭೂಪರಿವರ್ತನೆಯಾಗದ ಜಮೀನು ಗಳಿಗೂ ಪಂಚಾಯಿತಿಯಲ್ಲಿ 9–10 ಹಾಕಲಾಗಿರುವ ಹಲವಾರು ಪ್ರಕರಣ ಗಳಿವೆ.

ಈ ಮೂಲಕ ಸರ್ಕಾರಕ್ಕೆ ತೆರಿಗೆ ವಂಚಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು. ಸರ್ಕಾರಿ ಜಮೀನು ಗಳನ್ನು ಸ್ವಾಧೀನ ಮಾಡಿಕೊಂಡು ಬಡವರಿಗೆ ನಿವೇಶನ ಹಂಚಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ವಿಭಾಗೀಯ ಅಧ್ಯಕ್ಷ ಇಂಡ್ಲವಾಡಿ ಬಸವರಾಜು ಮಾತನಾಡಿ ಕೃಷಿ ಭೂಮಿ ಮಾಯವಾಗಿ ಬಡಾ ವಣೆಗಳು ನಿರ್ಮಾಣವಾಗುತ್ತಿವೆ.

ಭೂ ಮಾಫಿಯದೊಂದಿಗೆ ಅಧಿಕಾರಿಗಳು ಹೊಂದಾಣಿಕೆ ಮಾಡಿಕೊಂಡು ಸರ್ಕಾ ರದ ಕಾನೂನುಗಳನ್ನು ಗಾಳಿಗೆ ತೂರಿ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಟೀಕಿಸಿದರು. ತಹಶೀಲ್ದಾರ್‌ ಮಲ್ಲಿಕಾರ್ಜುನ್‌ ಸ್ಥಳಕ್ಕೆ ಆಗಮಿಸಿ ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಯಡವನಹಳ್ಳಿ ಕೃಷ್ಣಪ್ಪ, ತಾಲ್ಲೂಕು ಅಧ್ಯಕ್ಷ ಅರೇಹಳ್ಳಿ ಅಶ್ವತ್ಥ, ಶ್ರೀರಾಮ್‌, ರಗೇಶ್‌, ಜಯರಾಮ್‌ ಸರ್ಜಾ, ಮುರಳಿ, ವಿನೋದ್‌, ಶಂಕರ್‌ ಮತ್ತಿತರರು ಹಾಜರಿದ್ದರು.

ಪ್ರತಿಕ್ರಿಯಿಸಿ (+)