ಅಕ್ರಮ ಗಣಿಗಾರಿಕೆ ವರದಿ: ಹೆಗ್ಡೆ ಆತಂಕ

7

ಅಕ್ರಮ ಗಣಿಗಾರಿಕೆ ವರದಿ: ಹೆಗ್ಡೆ ಆತಂಕ

Published:
Updated:
ಅಕ್ರಮ ಗಣಿಗಾರಿಕೆ ವರದಿ: ಹೆಗ್ಡೆ ಆತಂಕ

ಬೆಳಗಾವಿ: `ಅಕ್ರಮ ಗಣಿಗಾರಿಕೆ ಕುರಿತು ತಾವು ಸಲ್ಲಿಸಿದ ವರದಿಯನ್ನು ರಾಜ್ಯ ಸರ್ಕಾರ ಸ್ವೀಕರಿಸಿಯೂ ಇಲ್ಲ, ತಿರಸ್ಕರಿಸಿಯೂ ಇಲ್ಲ. ಮುಂದಿನ ದಿನಗಳಲ್ಲಿ ಅದು ಕಸದ ಬುಟ್ಟಿ ಸೇರಬಹುದು~ ಎಂಬ ಆತಂಕವನ್ನು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಗುರುವಾರ ಇಲ್ಲಿ ವ್ಯಕ್ತಪಡಿಸಿದರು.ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಇಲ್ಲಿಗೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, `ರಾಜ್ಯ ಸರ್ಕಾರ ವರದಿ ಕುರಿತು ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ.  ಜನ ಹೋರಾಟ ಮಾಡದ ಹೊರತು ವರದಿ ಜಾರಿಯಾಗುವುದಿಲ್ಲ~ ಎಂದರು.

`ಅಕ್ರಮ ಗಣಿಗಾರಿಕೆ, ಅದನ್ನು ತಡೆಯುವ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಕುರಿತು ವರದಿಯಲ್ಲಿ ತಿಳಿಸಲಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ, ಧರ್ಮಸಿಂಗ್, ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರೂ ಸೇರಿದ್ದಾರೆ. ಇವರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕಿದೆ~ ಎಂದು ಅವರು ಹೇಳಿದರು.`ಲೋಕಾಯುಕ್ತರ ನೇಮಕವಾಗಬೇಕು. ರಾಜ್ಯದಲ್ಲಿ ಸೂಕ್ತ ವ್ಯಕ್ತಿ ಸಿಗದಿದ್ದರೆ ಹೊರ ರಾಜ್ಯದವರನ್ನಾದರೂ ಶೀಘ್ರ ನೇಮಕ ಮಾಡಬೇಕು. ಆದರೆ ತಮ್ಮ ರಾಜಕೀಯ ಹಿತಾಸಕ್ತಿ ಕಾಪಾಡುವ ಅಭ್ಯರ್ಥಿಗಾಗಿ ಶೋಧ ನಡೆದಿರುವುದರಿಂದ ವಿಳಂಬವಾಗುತ್ತಿದೆ~ ಎಂದು ಅವರು ಟೀಕಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry