ಗುರುವಾರ , ಮೇ 13, 2021
17 °C

ಅಕ್ರಮ ಗಣಿ: ಎರಡು ತಿಂಗಳು ನಿಷೇಧಾಜ್ಞೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ತಡೆಗಟ್ಟಲು ಮುಂದಾಗಿರುವ ಜಿಲ್ಲಾಡಳಿತ ರಾಮನಗರದ ಅರ್ಕಾವತಿ ಮತ್ತು ಚನ್ನಪಟ್ಟಣದ ಕಣ್ವ ನದಿ ಪಾತ್ರದಲ್ಲಿ ಎರಡು ತಿಂಗಳ ಕಾಲ ಭಾರತೀಯ ದಂಡ ಸಂಹಿತೆ 144ರ ಕಲಂ ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಿದೆ.



ಈ ಅವಧಿಯಲ್ಲಿ ಅರ್ಕಾವತಿ ಹಾಗೂ ಕಣ್ವ ನದಿ ಪಾತ್ರಗಳ ಸುತ್ತಮುತ್ತಲಿನ 100 ಮೀಟರ್ ಪ್ರದೇಶದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳನ್ನು ತೆಗೆದು ಸಾಗಾಣಿಕೆ ಮಾಡುವುದನ್ನು ಹಾಗೂ ನಿಷೇಧಿತ ಪ್ರದೇಶದಲ್ಲಿ ಸಾರ್ವಜನಿಕರು ಅಥವಾ ಅಕ್ರಮ ಮರಳು ಸಾಗಾಣಿಕೆದಾರರು ಐದು ಜನರಿಗಿಂತ ಹೆಚ್ಚಿಗೆ ಗುಂಪುಗಾರಿಕೆ ಸೇರುವುದನ್ನು ನಿಷೇಧಿಸಲಾಗಿದೆ.



ನಿಷೇಧಿತ ಪ್ರದೇಶದಲ್ಲಿ ದೋಣಿಗಳನ್ನು ಅಳವಡಿಸಿ ಮರಳು ಫಿಲ್ಟರ್ ಮಾಡುವುದನ್ನು, ಭಾರಿ ವಾಹನಗಳಾದ ಲಾರಿಗಳು, ಟಿಪ್ಪರ್‌ಗಳು, ಜೆ.ಸಿ.ಬಿ, ಟ್ರಾಕ್ಟರ್ ಮತ್ತು ಇತರೆ ವಾಹನಗಳು ಓಡಾಡುವುದನ್ನು, ಮರಳು ಉತ್ಪಾದನೆ ಮತ್ತು ಎತ್ತುವಳಿ ಮಾಡುವುದನ್ನು ಹಾಗೂ ನಿಷೇಧಿತ ಪ್ರದೇಶದಲ್ಲಿ ಯಾವುದೇ ರೀತಿಯ ಆಯುಧ ಹಿಡಿದು ತಿರುಗಾಡುವುದನ್ನು ನಿಷೇಧಿಸಿರುವುದಾಗಿ ಆದೇಶದಲ್ಲಿ ಹೇಳಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.