ಅಕ್ರಮ ಗಣಿ: ದಂಡ ವಸೂಲಿಗೆ ಸೂಚನೆ

7

ಅಕ್ರಮ ಗಣಿ: ದಂಡ ವಸೂಲಿಗೆ ಸೂಚನೆ

Published:
Updated:

ನವದೆಹಲಿ (ಪಿಟಿಐ): ಒಡಿಶಾದಲ್ಲಿ ಅಕ್ರಮವಾಗಿ ಕಬ್ಬಿಣ ಮತ್ತು ಮ್ಯಾಂಗನೀಸ್‌ ಅದಿರು  ಗಣಿಗಾರಿಕೆ ನಡೆಸಿರುವ­ವ­ರಿಂದ ರೂ. 60 ಸಾವಿರ ಕೋಟಿಯನ್ನು ವಸೂಲಿ ಮಾಡ­ಬೇಕು ಎಂದು ನ್ಯಾಯಮೂರ್ತಿ ಎಂ.ಬಿ. ಷಾ ನೇತೃತ್ವದ ಉನ್ನತ­ಮಟ್ಟದ ಆಯೋಗ ವರದಿ ನೀಡಿದೆ.ಅಕ್ರಮ ಗಣಿಗಾರಿಕೆ ಕುರಿತು 5 ಸಂಪುಟಗಳಲ್ಲಿ ವರದಿ ನೀಡಿರುವ ಆಯೋಗ, ಈ ಬಗ್ಗೆ ಕೇಂದ್ರ ಮತ್ತು ಒಡಿಶಾ ಸರ್ಕಾರಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಅಕ್ರಮವಾಗಿ ಗಣಿಗಾರಿಕೆ ನಡೆಸಿರುವ ಗುತ್ತಿಗೆದಾರರು ಮತ್ತು ಉದ್ಯಮಿಗಳಿಂದ ರೂ. 59,203 ಕೋಟಿ ಹಣವನ್ನು ಒರಿಸ್ಸಾ ಸರ್ಕಾರ ವಸೂಲಿ ಮಾಡಬೇಕೆಂದು ವರದಿ ಸೂಚಿಸಿದೆ.ಪರಿಸರ ಇಲಾಖೆಯ ಅನುಮತಿ ಪಡೆಯದೇ ರೂ. 45,453 ಕೋಟಿ ಮೌಲ್ಯದ ಕಬ್ಬಿಣದ ಅದಿರು ಹಾಗೂ ರೂ. 3,089 ಕೋಟಿ ಮೌಲ್ಯದ ಮ್ಯಾಂಗನೀಸ್‌ ಅದಿರನ್ನು ಅಕ್ರಮವಾಗಿ ತೆಗೆಯಲಾಗಿದೆ ಎಂದು ಆಯೋಗ ತಿಳಿಸಿದೆ.ರೂ. 250 ಕೋಟಿ ಗಳಿಸಿದ ಧೂಮ್–3

ಮುಂಬೈ (ಐಎಎನ್‌ಎಸ್‌): ಕಡಿಮೆ ಸಮಯ-­­ದಲ್ಲಿ ರೂ. 100 ಕೋಟಿ ಹಣ ಸಂಪಾದಿಸಿ ಹೆಸರಾಗಿದ್ದ ಧೂಮ್‌–3 ಚಲನ­ಚಿತ್ರ ಈಗ ಕೇವಲ ಎರಡು ವಾರ­ಗಳಲ್ಲಿ ದೇಶದಲ್ಲಿಯೇ ರೂ. 252.70 ಕೋಟಿ ಹಣ ಮಾಡಿ ಗಲ್ಲಾಪೆಟ್ಟಿಗೆ­ಯಲ್ಲಿ ಸದ್ದು ಮಾಡುತ್ತಿದೆ.

ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಒಳಗೊಂಡು ಈ ಹಣ  ಗಲ್ಲಾಪೆಟ್ಟಿಗೆಯಲ್ಲಿ ಜಮೆಯಾಗಿದೆ.

ವಿಜಯ್‌ ಕೃಷ್ಣ ಆಚಾರ್ಯ ನಿರ್ದೇ­ಶ­ನದ ಧೂಮ್‌–3 ಚಲನಚಿತ್ರ ಡಿ.20­ರಂದು ಸುಮಾರು ನಾಲ್ಕು ಸಾವಿರ ಕೇಂದ್ರ­ಗಳಲ್ಲಿ ತೆರೆ ಕಂಡಿತ್ತು. ಸುಮಾರು ರೂ. 100 ಕೋಟಿ ವೆಚ್ಚದ­ಲ್ಲಿ ನಿರ್ಮಾಣ­ವಾ­ಗಿ­ರುವ ಚಲನಚಿತ್ರದಲ್ಲಿ ಅಮೀರ್ ಖಾನ್‌, ಕತ್ರಿನಾ ಕೈಫ್‌ ಪ್ರಧಾನ ಪಾತ್ರದ­ಲ್ಲಿದ್ದಾರೆ.

‘ಕಳೆದ ಎರಡು ವಾರ ಧೂಮ್‌–3 ಹಿಂದಿಯ ಗಳಿಕೆ ರೂ. 240.78 ಕೋಟಿ. ತಮಿಳು ಮತ್ತು ತೆಲುಗುವಿನಲ್ಲಿ ರೂ.11.92 ಕೋಟಿ, ಒಟ್ಟು ರೂ.252.70 ಕೋಟಿ ಹಣ ಗಳಿಸಿದೆ’ ಎಂದು ಉದ್ಯಮ ವಿಶ್ಲೇ­ಷಕ ತರಣ್‌ ಆದರ್ಶ್‌ ಟ್ವೀಟ್‌ ಮಾಡಿದ್ದಾರೆ.

‘ಮಾಂಗಲ್ಯ ಲಾಟರೀಸ್‌’ಗೆ ಅಸ್ತು

ತಿರುವನಂತಪುರ (ಪಿ
ಟಿಐ): ಬಡ ಕುಟುಂಬಗಳ ಹೆಣ್ಣು­ಮಕ್ಕಳ ಮದುವೆಗೆ ಧನಸಹಾಯ ನೀಡುವ ಯೋಜನೆಗೆ ಹಣ ಸಂಗ್ರ­ಹಿ­­ಸಲು ವಾರದ ಲಾಟರಿ ಆರಂಭಿಸಲು ಕೇರಳ ಸರ್ಕಾರ ನಿರ್ಧರಿಸಿದೆ.

‘ಮಾಂಗಲ್ಯ ಲಾಟರೀಸ್‌’ ಎಂಬ ಹೆಸರಿನ ನೂತನ ಯೋಜ­­­­ನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಈ ಯೋಜನೆಯಿಂದ ಬಿಪಿಎಲ್‌ ಪಡಿತರ ಚೀಟಿ ಹೊಂದಿ­ರುವ ಕುಟುಂಬದ ಹೆಣ್ಣುಮಕ್ಕಳ ಮದುವೆಗೆ ರೂ. 30,000 ಸಹಾಯಧನ ಸಿಗಲಿದೆ. ರೂ. 1 ಲಕ್ಕಕ್ಕಿಂತ ಕಡಿಮೆ ವಾರ್ಷಿಕ ಆದಾ­ಯ­­ವಿರುವ ಎಪಿಎಲ್‌ ಪಡಿತರ ಚೀಟಿ ಹೊಂದಿ­­ರುವ ಕುಟುಂಬ­ಗಳ ಹೆಣ್ಣುಮಕ್ಕಳೂ ಯೋಜನೆಯ ಲಾಭ ಪಡೆಯಲು ಅರ್ಹರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಹಾರ: ಗುಂಡೇಟಿಗೆ ಇಬ್ಬರು ಬಲಿ

ಪಟ್ನಾ (ಐಎಎನ್‌ಎಸ್‌)
: ಪೊಲೀಸ್‌ ಅಧಿಕಾರಿ ಸೇರಿದಂತೆ ಇಬ್ಬರು ವ್ಯಕ್ತಿಗಳು ಗುಂಡೇಟಿಗೆ ಬಲಿಯಾದ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಬುಧವಾರ ರಾತ್ರಿ ನಡೆದಿದೆ.

ವೈ­­­­ಶಾಲಿ ಜಿಲ್ಲೆಯಿಂದ 30 ಕಿ.ಮೀ. ದೂರದಲ್ಲಿರುವ ಗ್ರಾಮ­­ದಲ್ಲಿ ಘಟನೆ ನಡೆದಿದ್ದು, ಗುಂಡು ಹಾರಿಸಿದ್ದ ಗ್ರಾಮದ ಮುಖಂಡ ತಲೆಮರೆಸಿಕೊಂಡಿದ್ದಾನೆ. ಹೊಸ ವರ್ಷದ ನಿಮಿತ್ತ ನಡೆದ ಸಂತೋಷ ­ಕೂಟದಲ್ಲಿ ಈ ದುರ್ಘಟನೆ ಜರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಕ್ಸಲರಿಂದ ಕಾನ್‌ಸ್ಟೆಬಲ್‌ ಹತ್ಯೆ

ರಾಯ್‌ಪುರ (ಪಿಟಿಐ)
: ಛತ್ತೀಸಗಡದ ಬಿಜಾಪುರ ಜಿಲ್ಲೆಯಲ್ಲಿ ಮಾವೊ­ವಾದಿ ನಕ್ಸಲರು ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಪಹರಿಸಿ, ಕೊಂದು ಹಾಕಿದ ಘಟನೆ ಗುರುವಾರ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry