ಭಾನುವಾರ, ಏಪ್ರಿಲ್ 11, 2021
26 °C

ಅಕ್ರಮ ಗಣಿ ವರದಿ: ಗೋವಾ ಸ್ಪೀಕರ್ ಸ್ವೀಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಣಜಿ (ಪಿಟಿಐ): ಅಕ್ರಮ ಗಣಿಗಾರಿಕೆ ಕುರಿತಂತೆ ಗೋವಾ ವಿಧಾನಸಭೆಯ`ಸಾರ್ವಜನಿಕ ಲೆಕ್ಕಪತ್ರ ಸಮಿತಿ~ (ಪಿಎಸಿ) ನೀಡಿರುವ ವಿವಾದಾತ್ಮಕ  ವರದಿಯನ್ನು ಸ್ಪೀಕರ್ ರಾಜೇಂದ್ರ ಅರಳೇಕರ್ ಸ್ವೀಕರಿಸಿದ್ದಾರೆ.

ಅರಳೇಕರ್ ಅವರಿಗೂ ಮೊದಲು ಸ್ಪೀಕರ್ ಆಗಿದ್ದ ಪ್ರತಾಪಸಿಂಗ್ ರಾಣೆ ಅವರು ಈ ವರದಿಯನ್ನು ಒಪ್ಪಿರಲಿಲ್ಲ.ವಿಧಾನಸಭೆಯಲ್ಲಿ ಈ ವರದಿ ಮಂಡನೆಯಾಗುವುದಕ್ಕೂ ಮೊದಲೇ ವರದಿಯ ಅಂಶಗಳು ಮಾಧ್ಯಮಕ್ಕೆ ಸೋರಿಕೆ ಆಗಿದ್ದವು. ಆದ್ದರಿಂದ ವರದಿಯ ವಿಶ್ವಾಸಾರ್ಹತೆ ಬಗ್ಗೆ ಪ್ರತಾಪಸಿಂಗ್ ರಾಣೆ   ಅನುಮಾನ ವ್ಯಕ್ತಪಡಿಸಿದ್ದರು.

`ಪಿಎಸಿ~  ಸದಸ್ಯರಾಗಿದ್ದ ಕಾಂಗ್ರೆಸ್ ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷಗಳಿಗೆ ನಿಷ್ಠರು ಎನ್ನಲಾದ ನಾಲ್ವರು ಸದಸ್ಯರು ಈ ವರದಿಗೆ ಸಹಿ ಹಾಕಲು ನಿರಾಕರಿಸಿದ್ದರು. ಈ ಕಾರಣಗಳಿಂದಾಗಿ ವರದಿ  ವಿವಾದಾತ್ಮಕವಾಗಿದೆ.ಈ ವರದಿಯು ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರನ್ನು ಅಕ್ರಮ ಗಣಿಗಾರಿಕೆಯಲ್ಲಿ ಬೊಟ್ಟು ಮಾಡಿದೆ. ನಾಲ್ಕು ಸಾವಿರ ಕೋಟಿ ರೂಪಾಯಿಗಳ ಅಕ್ರಮ ಗಣಿಗಾರಿಕೆ ನಡೆದಿದೆ ಎಂದು ಆಗ ವಿರೋಧ ಪಕ್ಷದ ನಾಯಕರಾಗಿದ್ದ ಹಾಲಿ ಮುಖ್ಯಮಂತ್ರಿ ಮನೋಹರ್ ಪಾರಿಕರ್ ನೇತೃತ್ವದ `ಪಿಎಸಿ~ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

`ಪಿಎಸಿ ನೀಡಿರುವ ವರದಿಯನ್ನು ಪರಿಶೀಲಿಸಿಯೇ ಅಂಗೀಕರಿಸಿದ್ದೇನೆ. ಇದನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳುವ ವಿಚಾರ ಸರ್ಕಾರಕ್ಕೆ ಬಿಟ್ಟಿದ್ದು~ ಎಂದು ಅರಳೇಕರ್ ತಿಳಿಸಿದ್ದಾರೆ.

ಗೋವಾ ಅಕ್ರಮ ಗಣಿಗಾರಿಕೆ ಹಗರಣ ಕುರಿತಂತೆ ತನಿಖೆ ನಡೆಸಲು ಕೇಂದ್ರ ಗಣಿ ಸಚಿವಾಲಯ ರಚಿಸಿದ್ದ ನ್ಯಾಯಮೂರ್ತಿ ಎಂ.ಬಿ. ಷಾ ಆಯೋಗ ಕೂಡ `ಪಿಎಸಿ~ ವರದಿಯನ್ನು ಗಮನಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.