ಅಕ್ರಮ ಚಟುವಟಿಕೆ

ಮಂಗಳವಾರ, ಜೂಲೈ 16, 2019
28 °C

ಅಕ್ರಮ ಚಟುವಟಿಕೆ

Published:
Updated:

ಜೆ.ಪಿ.ನಗರ 3ನೇ ಹಂತ ಈಸ್ಟ್ ಎಂಡ್ ಹತ್ತಿರ ರಸ್ತೆ ಬದಿ ತಿಂಡಿ ಅಂಗಡಿಯವರು ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ. ಸಂಜೆಯಾದರೆ ಒಂದು ಗಿರಾಕಿಗೆ ಇಂತಿಷ್ಟು ಕಮಿಷನ್ ಪಡೆದು ಹುಡುಗಿಯರು ಮತ್ತು ಹುಡುಗರನ್ನು ವ್ಯವಹಾರಕ್ಕೆ ಕುದುರಿಸುತ್ತಾರೆ. ಇವರಿಂದಾಗಿ ಸುಮಾರು 3 ವರ್ಷಗಳಿಂದ ಈ ಸ್ಥಳ ವೇಶ್ಯಾವಾಟಿಕೆ ದಂಧೆಯ ಕೇಂದ್ರವಾಗಿದೆ. ಮರ್ಯಾದಸ್ಥ ಮಹಿಳೆಯರು ತಿರುಗಾಡುವಂತೆಯೇ ಇಲ್ಲ ಎಂಬಂಥ ಸ್ಥಿತಿ ತಲುಪಿದೆ.

ಈ ಜಾಗದಲ್ಲಿ ಈ ಹಿಂದೆ ಡಕಾಯಿತಿ ನಡೆದಿತ್ತು. ಆ ಗ್ಯಾಂಗ್‌ಗೆ ಸುತ್ತಮುತ್ತಲಿನವರ ಸಹಕಾರ ಇತ್ತು ಎಂಬ ವದಂತಿಯಿದೆ. ಈಗಲೂ ಇಲ್ಲಿ ಡಕಾಯಿತಿ ಸರಗಳ್ಳತನ, ಪಿಕ್‌ಪಾಕೆಟ್ ಅವಿರತವಾಗಿ ನಡೆಯುತ್ತಿದೆ. ಇದರ ಬಗ್ಗೆ ಪೊಲೀಸರೂ ಕ್ರಮ ಕೈಗೊಳ್ಳದೆ ಸುಮ್ಮನಿರುವುದು ನೋಡಿದರೆ ಅನುಮಾನ ಬರುತ್ತದೆ.

ಈ ಜಾಗದಲ್ಲಿ ಮಹಾನಗರ ಪಾಲಿಕೆಯವರು ಪಾನಿಪುರಿ ಸೇರಿದಂತೆ ಎಲ್ಲ ರೀತಿಯ ಅಂಗಡಿಯನ್ನು ನಿಷೇಧಿಸಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಬೇಕು. ಸಾರ್ವಜನಿಕರು ನೆಮ್ಮದಿಯಿಂದ ಬದುಕಲು ಅವಕಾಶ ಕಲ್ಪಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry