ಅಕ್ರಮ ತರಗತಿ ಬಂದ್‌ಗೆ ಆದೇಶ

ಗುರುವಾರ , ಜೂಲೈ 18, 2019
22 °C

ಅಕ್ರಮ ತರಗತಿ ಬಂದ್‌ಗೆ ಆದೇಶ

Published:
Updated:

ಅಫಜಲಪುರ: ಅಫಜಲಪುರ ತಾಲ್ಲೂಕಿನಲ್ಲಿ ಮತ್ತು ಪಟ್ಟಣದಲ್ಲಿ ಕೆಲವು ಶಿಕ್ಷಣ ಸಂಸ್ಥೆಗಳು ಅಕ್ರಮವಾಗಿ ಹೆಚ್ಚಿನ ತರಗತಿಗಳನ್ನು ನಡೆಸುತ್ತಿವೆ. ಅಂಥ ತರಗತಿಗಳನ್ನು ಮುಚ್ಚದಿದ್ದರೆ,ಅವುಗಳ ಮೇಲೆ ಕ್ರಿಮಿನಲ್  ಮೊಕದ್ದಮೆ ದಾಖಲು ಮಾಡಲಾಗುವುದೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗಲಮಡಿ ಅವರು ಎಚ್ಚರಿಸಿದ್ದಾರೆ.ಅಕ್ರಮವಾಗಿ ತರಗತಿಗಳನ್ನು ನಡೆಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಯೊಂದಕ್ಕೆ ಬುಧವಾರ ಭೇಟಿ ನೀಡಿದ ಅವರು, `ಪ್ರಜಾವಾಣಿ~ಯೊಂದಿಗೆ ಮಾತನಾಡಿ, `ಈ ಸಂಸ್ಥೆಯು ತನಗೆ ಅನುಮತಿ ಇಲ್ಲದಿದ್ದರೂ, ನಾಲ್ಕು ಮತ್ತು ಐದನೇ ತರಗತಿಗಳನ್ನು ನಡೆಸುತ್ತಿದೆ. ಆ ತರಗತಿಗಳಲ್ಲಿ ಸುಮಾರು 100 ವಿದ್ಯಾರ್ಥಿಗಳಿದ್ದಾರೆ. ಅವರೆಲ್ಲರೂ ತ್ಲ್ಲಾಲೂಕಿನ ವಿವಿಧ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪ್ರವೇಶ ಪಡೆದವರು~ ಎಂದು ತಿಳಿಸಿದ್ದಾರೆ.`ಈ ಸಂಸ್ಥೆಯು ಒಂದರಿಂದ ಮೂರನೇ ತರಗತಿಯವರೆಗೆ ಶಾಲೆ ನಡೆಸಲು ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಮಕ್ಕಳು ಶಾಲೆಯಲ್ಲಿದ್ದಾರೆ.ಆದರೆ ಮಕ್ಕಳು ಪ್ರವೇಶ ಪಡೆದ ಬಗ್ಗೆ ದಾಖಲೆ ಕೇಳಿದರೆ ಏನೂ ನೀಡುತ್ತಿಲ್ಲ. ಈ ಕುರಿತು ವಿಚಾರಣೆ ನಡೆಸಲಾಗುತ್ತಿದೆ~  ಎಂದು ಅವರು ತಿಳಿಸಿದರು.ಸಂಪನ್ಮೂಲ ಶಿಕ್ಷಕರೂ ಕ್ಷೇತ್ರ ಶಿಕ್ಷಣಾಧಿಕಾರಿ   ಚಿತ್ರಶೇಖರ ದೇಗಲಮಡಿ ಅವರೊಂದಿಗಿದ್ದು, ಆ ಶಾಲೆಯಲ್ಲಿನ ನಾಲ್ಕು ಮತ್ತು ಐದನೇ ತರಗತಿಯ   ಪ್ರತಿಯೊಬ್ಬ ವಿದ್ಯಾರ್ಥಿಯನ್ನು ವಿಚಾರಿಸಿದರು.`ತಾಲ್ಲೂಕಿನಲ್ಲಿ ಇದೇ ಬಗೆಯಲ್ಲಿನ ಹೆಚ್ಚಿನ ತರಗತಿಗಳನ್ನು ಕೆಲವು ಶಿಕ್ಷಣ ಸಂಸ್ಥೆಗಳು ನಡೆಸುತ್ತಿವೆ. ಇಂಥ ಒಟ್ಟು 30ಕ್ಕೂ ಹೆಚ್ಚು ಶಾಲೆಗಳಿವೆ. ಅಲ್ಲಿ 2000ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ~ ಎಂದ ಚಿತ್ರಶೇಖರ ದೇಗಲಮಡಿ ಅವರು, `ಈ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೊಂದಿರುತ್ತಾರೆ.  ಹೊರಗಿದ್ದರೂ ಅವರಿಗೆ ಅಲ್ಲಿ ಹಾಜರಾತಿ ಸಿಗುತ್ತದೆ. ಅಲ್ಲಿ ಸರ್ಕಾರ ನೀಡುವ ಪಠ್ಯಪುಸ್ತಕ ಮತ್ತು ಬಿಸಿಯೂಟ ಯಾರ ಪಾಲಾಗುತ್ತಿದೆ ಎಂಬುದು ಗೊತ್ತಿಲ್ಲ?~ ಎಂದು ಕಳವಳ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry