ಅಕ್ರಮ ದಾಸ್ತಾನು: ಗೋದಾಮು ಮೇಲೆ ದಾಳಿ

7

ಅಕ್ರಮ ದಾಸ್ತಾನು: ಗೋದಾಮು ಮೇಲೆ ದಾಳಿ

Published:
Updated:

ಸಿಂಧನೂರು: ನಗರದ ತುಳಸಿ ರೈಸ್‌ಮಿಲ್‌ನಲ್ಲಿ ಅಕ್ರಮ ದಾಸ್ತಾನು ಇಟ್ಟಿದ್ದಾರೆನ್ನುವ ಸುಳುವಿನ ಮೇರೆಗೆ ಸಹಾಯಕ ಆಯುಕ್ತ ಉಜ್ವಲ್ ಕುಮಾರ್ ಘೋಷ್ ಮತ್ತು ತಹ ಸೀಲ್ದಾರ್ ಡಾ.ಶರಣಪ್ಪ ಸತ್ಯಂಪೇಟೆ ಗುರುವಾರ ಸಾಯಂಕಾಲ ದಾಳಿ ಮಾಡಿದ ಘಟನೆ ಜರುಗಿದೆ. 670 ಚೀಲ ಅಕ್ಕಿ ಗೋದಾಮಿನಲ್ಲಿ ದೊರೆತಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪೂರೈಸಿದ ಅಕ್ಕಿ ಇರಬಹುದೆಂದು ಅಂದಾಜಿಸಲಾಗಿದೆ.ದಾಳಿ ಪ್ರಕ್ರಿಯೆ ಮುಗಿದ ನಂತರ ‘ಪ್ರಜಾವಾಣಿ’ಯೊಂದಿಗೆ ಮಾತ ನಾಡಿದ ಸಹಾಯಕ ಆಯುಕ್ತರು ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸೇರಿದ ಅಕ್ಕಿಯೋ ಇಲ್ಲವೋ ಎನ್ನುವುದನ್ನು ಪರೀಕ್ಷಿಸಲು ಪ್ರಯೋಗಾಲಯಕ್ಕೆ ಶಾಂಪಲ್ ಅಕ್ಕಿಯನ್ನು ಕಳುಹಿಸಿ ಕೊಡಲಾಗುತ್ತದೆ. ಅಲ್ಲಿಯವರೆಗೆ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ದಾಸ್ತಾನನ್ನು ಸೀಜ್ ಮಾಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕ ವಿಶ್ವನಾಥ, ಶಿರಸ್ತೇದಾರ ನಾಗರಾಜ ಉಪಸ್ಥಿತರಿದ್ದರು.ವ್ಯವಸ್ಥಿತ ಜಾಲ: ಸಿಂಧನೂರು ತಾಲ್ಲೂಕಿನಲ್ಲಿ ಸರ್ಕಾರ ಪೂರೈಕೆ ಮಾಡುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪಡಿತರ ಅಕ್ಕಿಯನ್ನು ವಿನಿಮಯ ಮಾಡುವ ವ್ಯವಸ್ಥಿತ ಜಾಲವೇ ಇದ್ದು, ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವ್ಯವಸ್ಥಾ ಪಕರು ಮತ್ತು ಕಂದಾಯ ಇಲಾ ಖೆಯ ಅಧಿಕಾರಿಗಳು ಅವ್ಯ ವಹಾರ ದಲ್ಲಿ ಶಾಮೀಲಾಗಿದ್ದಾರೆ ಎನ್ನುವ ಶಂಕೆ ಇದೆ. ತನಿಖೆಯ ನಂತರ ಸತ್ಯ ಬಯಲಾಗಲಿದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry