ಅಕ್ರಮ ನುಸುಳಿವಿಕೆಯಿಂದ ಭದ್ರತೆಗೆ ದಕ್ಕೆ
ಸಿದ್ದಾಪುರ: `ದೇಶದ ಹಲವು ಸಮಸ್ಯೆಗಳಿಗೆ ಹಿಂದುತ್ವ ಸಂಘಟನೆಯೇ ಪರಿಹಾರ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್)ದ ವಿಭಾಗ ಕಾರ್ಯವಾಹ ಸೀತಾರಾಮ ಭಟ್ ಕೆರೆಕೈ ಹೇಳಿದರು.
ತಾಲ್ಲೂಕಿನ ಶಿರಗುಣಿ ಪ್ರೌಢಶಾಲೆಯ ಆವರಣದಲ್ಲಿ ಈಚೆಗೆ ಏರ್ಪಡಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ಜಿಲ್ಲಾ ಪ್ರಾಥಮಿಕ ಶಿಕ್ಷಾವರ್ಗದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು,
`ನಮ್ಮ ನೆರೆ ರಾಷ್ಟ್ರಗಳ ಕಿತಾಪತಿಯಿಂದಾಗಿ ಆಂತರಿಕ ಮತ್ತು ಬಾಹ್ಯ ಗಂಡಾಂತರ ಎದುರಿಸುತ್ತಿದ್ದೇವೆ.ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದಾಗಿ ಸಮಸ್ಯೆಗಳು ಜಟಿಲವಾಗುತ್ತಿವೆ. ಚೀನಾ, ಬಾಂಗ್ಲಾ, ಪಾಕಿಸ್ತಾನ ಭಯೋತ್ಪಾದನೆ, ಅಕ್ರಮ ನುಸುಳುವಿಕೆಯ ಮೂಲಕ ದೇಶದ ಆಂತರಿಕ ಭದ್ರತೆಗೆ ತೊಂದರೆ ಉಂಟು ಮಾಡುತ್ತಿವೆ. ಭಾರತದಲ್ಲಿರುವ ಅನಕ್ಷರತೆ, ಬಡತನದ ದುರುಪಯೋಗ ಮಾಡಿಕೊಂಡು ಮತಾಂತರ ಮಾಡಲಾಗುತ್ತಿದೆ. ಹಿಂದೂ ಸಮಾಜ ಜಾಗೃತಗೊಂಡು ಒಗ್ಗಟ್ಟು ಪ್ರದರ್ಶಿಸಿದಾಗ ಈ ಸಮಸ್ಯೆಗಳು ಪರಿಹಾರ ಕಾಣಲು ಸಾಧ್ಯ~ ಎಂದರು.
ಅಧ್ಯಕ್ಷತೆಯನ್ನು ಗಣಪತಿ ಭಟ್ ಕಾಜಿನಮನೆ ವಹಿಸಿದ್ದರು. ಶಿಬಿರಾಧಿಕಾರಿ ರಮೇಶ ಹೆಗಡೆ ಸ್ವಾಗತಿಸಿದರು. ಜಿಲ್ಲಾ ಬೌದ್ಧಿಕ ಪ್ರಮುಖ ಗೋಪಾಲ ಹೆಗಡೆ ವಂದಿಸಿದರು.
ಶಿರಸಿ ಜಿಲ್ಲೆಯ 5 ತಾಲ್ಲೂಕುಗಳಿಂದ 92 ಶಿಬಿರಾರ್ಥಿಗಳು ಶಿಕ್ಷಾವರ್ಗದಲ್ಲಿ ಭಾಗವಹಿಸಿದ್ದರು. ಸಮಾರೋಪ ಕಾರ್ಯಕ್ರಮಕ್ಕೆ ಮೊದಲು ಶಾರೀರಿಕ ಪ್ರದರ್ಶನ ಮತ್ತು ಪಥಸಂಚಲನ ನಡೆಯಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.