ಅಕ್ರಮ ಪಂಪ್‌ಸೆಟ್ ಸಕ್ರಮಕ್ಕೆ ವಿರೋಧ

7

ಅಕ್ರಮ ಪಂಪ್‌ಸೆಟ್ ಸಕ್ರಮಕ್ಕೆ ವಿರೋಧ

Published:
Updated:

ದಾವಣಗೆರೆ:ಅಕ್ರಮ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವ ಸರ್ಕಾರದ ನಿರ್ಧಾರವನ್ನು ಭದ್ರಾ ‘ಕಾಡಾ’ ವ್ಯಾಪ್ತಿಯ ನೀರು ಬಳಕೆದಾರರ ಸಹಕಾರ ಸಂಘಗಳ ಒಕ್ಕೂಟ ತೀವ್ರವಾಗಿ ಖಂಡಿಸಿದೆ.ನಾಲೆಗಳಿಗೆ ಹಾಕಿರುವ ಅಕ್ರಮ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಿದರೆ ಅಚ್ಚುಕಟ್ಟುದಾರರಿಗೆ ಶಾಶ್ವತ ಸಂಕಷ್ಟ ತಂದೊಡ್ಡಿದಂತೆ ಆಗುತ್ತದೆ. ಭದ್ರಾ ನಾಲೆಯಲ್ಲಿ ದಿನೇ ದಿನೇ ಅಕ್ರಮ ಪಂಪ್‌ಸೆಟ್‌ಗಳ ಹಾವಳಿ ಹೆಚ್ಚುತ್ತಿದೆ. ಅವುಗಳನ್ನು ಸಕ್ರಮಗೊಳಿಸಿದರೆ ಅಚ್ಚುಕಟ್ಟುದಾರರು ಶಾಶ್ವತವಾಗಿ ನೀರಿನಿಂದ ವಂಚಿತರಾಗುತ್ತಾರೆ ಎಂದು ಒಕ್ಕೂಟದ ಅಧ್ಯಕ್ಷ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ವಿ. ಪಟೇಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವಾಗ ನೀರಿನ ಮೂಲವನ್ನು ಗಂಭೀರವಾಗಿ ಪರಿಗಣಿಸಬೇಕು. ನಾಲೆಗೆ ಹಾಕಿರುವ ಅಕ್ರಮ ಪಂಪ್‌ಸೆಟ್‌ಗಳನ್ನು ಹೊರತುಪಡಿಸಿ, ಇತರೆ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry