ಮಂಗಳವಾರ, ನವೆಂಬರ್ 19, 2019
28 °C

ಅಕ್ರಮ ಮದ್ಯದ ಬಾಕ್ಸ್‌ಗಳ ವಶ

Published:
Updated:

ಧಾರವಾಡ: ಕಲಘಟಗಿ ತಾಲ್ಲೂಕಿನ ದೇವಿಕೊಪ್ಪ ಗ್ರಾಮದಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಸುಮಾರು 14,640 ಸಾವಿರ ರೂಪಾಯಿ ಮೌಲ್ಯದ ಮದ್ಯವನ್ನು ಅಬಕಾರಿ ಜಾರಿ ಮತ್ತು ಲಾಟರಿ ನಿಷೇದ ದಳದ ಸಿಬ್ಬಂದಿ ಗುರುವಾರ ವಶಪಡಿಸಿಕೊಂಡಿದ್ದಾರೆ.ದೇವಿಕೊಪ್ಪ ಗ್ರಾಮದ ಚಾಯಾ ಅವ್ವನ್ನವರ ಹಾಗೂ ಮಹಾದೇವ ದೇವಜಿ ಎಂಬುವವರೇ ಅಕ್ರಮವಾಗಿ ಮದ್ಯವವನ್ನು ಮಾರಾಟ ಮಾಡುತ್ತಿದ್ದರು. ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಗಸ್ತು ತಿರುಗುತ್ತಿದ್ದ ಅಬಕಾರಿ ಪೊಲೀಸರು ಖಚಿತ ಮಾಹಿತಿ ತಿಳಿದ ಕೂಡಲೇ ಪೊಲೀಸರು ದಾಳಿ ನಡೆಸಿದ್ದಾರೆ. ಛಾಯಾ ಹಾಗೂ ಮಹಾದೇವ ಅವರು ಬೇರೆ ಬೇರೆ ಮನೆಯವರಾಗಿದ್ದು, ಪ್ರತ್ಯೇಕವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದರು. ಬಂಧಿತರಿಂದ ಸುಮಾರು 14,640 ರೂಪಾಯಿ ಬೆಲೆಬಾಳುವ ಐದು ಮದ್ಯದ ಬಾಕ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)