ಗುರುವಾರ , ನವೆಂಬರ್ 21, 2019
23 °C

ಅಕ್ರಮ ಮದ್ಯ ದಾಸ್ತಾನು: ವಶ

Published:
Updated:

ಮುಂಡಗೋಡ: ಅನಧಿಕೃತವಾಗಿ ಮದ್ಯದ ಬಾಟಲಿಗಳನ್ನು ದಾಸ್ತಾನು ಮಾಡಲಾಗಿದ್ದ ಕಿರಾಣಿ ಅಂಗಡಿಯ ಮೇಲೆ ದಾಳಿ ನಡೆಸಿದ ತಹಶೀಲ್ದಾರ್ ಬಸವರಾಜ ಮೆಳವಣಕಿ ನೇತೃತ್ವದ ತಂಡವು ಸುಮಾರು ರೂ 8ಸಾವಿರ ಮೌಲ್ಯದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡ ಘಟನೆ ತಾಲ್ಲೂಕಿನ ಕಾತೂರ ಡಿಪೋ ಸನಿಹ ಶನಿವಾರ ರಾತ್ರಿ ನಡೆದಿದೆ.ಶಂಕರಗೌಡ ಪಾಟೀಲ ಎಂಬುವರಿಗೆ ಸೇರಿದ ಕಿರಾಣಿ ಅಂಗಡಿಯಲ್ಲಿ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಸುಳಿವಿನ ಮೇರೆಗೆ ಈ ದಾಳಿ ನಡೆಸಲಾಗಿದೆ.ವಿವಿಧ ಕಂಪೆನಿಯ ಒಟ್ಟು 133 ಬಾಟಲಿ, ಟಿನ್ ಹಾಗೂ ಪೌಚ್‌ಗಳನ್ನು ದಾಳಿಯ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾಗಿದೆ. ಕಂದಾಯ ಇಲಾಖೆ ಸಿಬ್ಬಂದಿ ಜಗದೀಶ, ಚಿದಾನಂದ ಶೇರಖಾನೆ  ದಾಳಿಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)