ಬುಧವಾರ, ನವೆಂಬರ್ 20, 2019
21 °C

ಅಕ್ರಮ ಮದ್ಯ ಮಾರಾಟ: ಆರೋಪಿ ಬಂಧನ

Published:
Updated:

ಯಾದಗಿರಿ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳದ ಅಧಿಕಾರಿಗಳು ಬಂಧಿಸಿದ್ದು, ರೂ.29,775 ಮೌಲ್ಯದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.ತಾಲ್ಲೂಕಿನ ವಂಕಸಂಬ್ರಮದ ನಾಗೇಂದ್ರಪ್ಪ ಭೀಮಶಪ್ಪ ಗಣಪೂರ ಎಂಬಾತನನ್ನು ಬಂಧಿಸಲಾಗಿದೆ.ಗ್ರಾಮದಲ್ಲಿ ಮಾರಾಟ ಮಾಡಲು ಆರೋಪಿಯು ಮನೆಯಲ್ಲಿ ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ಸಂಗ್ರಹಣೆ ಮಾಡಿದ ಬಗ್ಗೆ ಮಾಹಿತಿ ಪಡೆದ ಇನ್ಸ್‌ಪೆಕ್ಟರ್ ವೈ.ಪಿ. ಶಿವಲಿಂಗಾರಾಧ್ಯ ಮತ್ತು ಸಿಬ್ಬಂದಿಗಳಾದ ವಿಠೋಬಾ, ಕಾಶಿನಾಥ, ಸಾಬಯ್ಯ, ಲಿಂಗಪ್ಪ, ಮಹ್ಮದ್ ಶರೀಫ್, ಗುಂಡಪ್ಪ, ಝಾಕೀರ ಪಟೇಲ್ ದಾಳಿ ನಡೆಸಿದರು.ಓರಿಜಿನಲ್ ಚ್ವಾಯಿಸ್ 240 ಬಾಟಲಿ, ಕಿಂಗ್ ಫೀಶರ್ ಬೀರ್ 84 ಬಾಟಲಿ, ನಾಕೌಟ್ ಸ್ಟ್ರಾಂಗ್ ಬೀರ್ 48 ಬಾಟಲಿ, ಓಲ್ಡ್ ಟವೆರನ್ ವಿಸ್ಕಿಯ 96 ಪೌಚ್‌ಗಳು, ಹೈವರ್ಡ್ಸ್ ವಿಸ್ಕಿಯ 96 ಪೌಚ್‌ಗಳು, ಸೇರಿದಂತೆ ಒಟ್ಟು ರೂ. 29,775 ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ವಿಭಾಗ ವಿಶೇಷ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)