ಅಕ್ರಮ ಮದ್ಯ ಮಾರಾಟ ನಿಷೇಧಕ್ಕೆ ಆಗ್ರಹ

7

ಅಕ್ರಮ ಮದ್ಯ ಮಾರಾಟ ನಿಷೇಧಕ್ಕೆ ಆಗ್ರಹ

Published:
Updated:

ಹರಪನಹಳ್ಳಿ: ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ಕೂಡಲೇ ತಡೆಗಟ್ಟಬೇಕೆನ್ನುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಶುಕ್ರವಾರ ಪಟ್ಟಣದ ಅಬಕಾರಿ ಕಚೇರಿಯ ಮುಂದೆ ವಿವಿಧ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿದರು.ಪಟ್ಟಣದ ಬಹುತೇಕ ಡಾಬಾ ಹಾಗೂ ಮಾಂಸಾಹಾರಿ ಹೋಟೆಲ್‌ಗಳಲ್ಲಿ ಅನಧಿಕೃತ ಮದ್ಯದ ಮಾರಾಟ ಮೀತಿ ಮೀರಿದೆ. ಅಧಿಕ ಹಣ ಸುಲಿಯುತ್ತಿರುವ ವೈನ್‌ಶಾಪ್ ಮಾಲೀಕರು ಹಾಗೂ ಡಾಬಾಗಳ ಮೇಲೆ ಕೂಡಲೇ ಕ್ರಮ ಜರುಗಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಅ. 22ರ ಒಳಗೆ ಕ್ರಮ ಜರುಗಿಸದಿದ್ದರೇ ಉಗ್ರ ಚಳವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.ವಿವಿಧ ಸಂಘಟನೆಯ ಇದ್ಲಿ ರಾಮಪ್ಪ, ಎಚ್.ಎಂ. ಮಹೇಶ್ವರ ಸ್ವಾಮಿ, ಎ.ಎಂ. ವಿಶ್ವನಾಥ, ವಕೀಲ ಕೆ. ಜಗದಪ್ಪ, ಎನ್. ರವಿ, ಸಾಧಿಕ್ ಬಾಷಾ, ಎಚ್.ಎಂ. ಗೌಸ್, ಹುಣಸಿಹಳ್ಳಿ ಕೊಟ್ರಪ್ಪ, ಕೂಲಹಳ್ಳಿ ನಾಗೇಶ್, ಎಸ್. ಯಲ್ಲಪ್ಪ, ಕರಡಿದುರ್ಗದ ಚೌಡಪ್ಪ, ದೊಡ್ಮನಿ ಪ್ರಸಾದ್, ಇಬ್ರಾಹಿಂ ಸಾಹೇಬ್, ಸಂತೋಷ್, ಶಿವಾನಂದಪ್ಪ  ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry