ಮಂಗಳವಾರ, ನವೆಂಬರ್ 12, 2019
24 °C

ಅಕ್ರಮ ಮದ್ಯ ವಶ

Published:
Updated:

ಬಾಣಾವರ: ಪಟ್ಟಣದ ಪೊಲೀಸರು ಈಚೆಗೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 22,713 ರೂಪಾಯಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.ಸಮೀಪದ ಕೊಂಡಬಾಗಿಲು ಗ್ರಾಮದಲ್ಲಿ ಷಡಾಕ್ಷರಿ ಎಂಬುವವರು ತಮ್ಮ ಮನೆ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಸುಳಿವು ಪಡೆದ ಪಿಎಸ್‌ಐ ಲೋಕೇಶ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋದಾಗ 1,440 ರೂಪಾಯಿ ಮೌಲ್ಯದ ವಿವಿಧ ಬ್ರಾಂಡ್‌ನ ಮದ್ಯದ ಬಾಟಲಿ, ಸ್ಯಾಚೆಟ್‌ಗಳು ಪತ್ತೆಯಾದವು. ಆರೋಪಿ ಪರಾರಿಯಾಗಿದ್ದು, ಮದ್ಯ ವಶಪಡಿಸಿಕೊಂಡು ಪ್ರಕರಣವನ್ನು ಬಾಣಾವರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.ಮತ್ತೊಂದು ಪ್ರಕರಣದಲ್ಲಿ ಸಮೀಪದ ಪುರ್ಲೆಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 21,273ರೂ. ಮೌಲ್ಯದ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.ಗ್ರಾಮದ ಯೋಗೀಶನಾಯ್ಕ ಎಂಬಾತ ತಮ್ಮ ಅಂಗಡಿ ಸಮೀಪ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪಿಎಸ್‌ಐ ಲೋಕೇಶ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋದಾಗ ಆರೋಪಿ ಪರಾರಿಯಾಗಿದ್ದು, ಮಾರಾಟ ಮಾಡಲು ದಾಸ್ತಾನು ಮಾಡಿದ್ದ ವಿವಿಧ ಬ್ರಾಂಡ್‌ನ ಮದ್ಯದ ಬಾಟಲಿಗಳು, ಸಾಚೆಟ್‌ಗಳನ್ನು ವಶಪಡಿಸಿಕೊಂಡು ಪ್ರಕರಣವನ್ನು ಬಾಣಾವರ ಠಾಣೆಯಲ್ಲಿ ದಾಖಲಿಸಲಾಗಿದೆ.

ಪ್ರತಿಕ್ರಿಯಿಸಿ (+)