ಭಾನುವಾರ, ಮೇ 29, 2022
21 °C

ಅಕ್ರಮ ಮರಳು ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿ.ನರಸೀಪುರ: ತಾಲ್ಲೂಕಿನ ಕಾವೇರಿ ಮತ್ತು ಕಪಿಲಾ ನದಿ ಪಾತ್ರಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ನಿಷೇಧಿಸಿ ಪ್ರಕೃತಿ ಸಂಪತ್ತನ್ನು ಉಳಿಸುವಂತೆ ತಾಲ್ಲೂಕಿನ ಪ್ರಗತಿಪರ ಸಂಘಟನೆಗಳು ರಾಜ್ಯಪಾಲರನ್ನು ಒತ್ತಾಯಿಸಿವೆ.ಇತ್ತೀಚಿಗೆ ತಲಕಾಡಿನ ವೈದ್ಯನಾಥೇ ಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದ ರಾಜ್ಯಪಾಲ ಹಂಸರಾಜ್ ಭಾರಧ್ವಜ್ ಅವರನ್ನು ಭೇಟಿ ಮಾಡಿದ ಪ್ರಗತಿ ಪರ ಸಂಘಟನೆಗಳ ಮುಖಂಡರು ಅವರಿಗೆ ಮನವಿ ಪತ್ರ ಅರ್ಪಿಸಿ ಈ ಒತ್ತಾಯ ಮಾಡಿದ್ದಾರೆ.ಕೆಎಂಎಂಸಿ ನಿಯಮಾವಳಿ 1994ರ ಅನ್ವಯ ಮರಳು ನಿಕ್ಷೇಪಗಳನ್ನು ಲೀಸ್ ನೀಡುತ್ತಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ 2000 ನೇ ಸಾಲಿನಿಂದ ನಿಯಾಮವಳಿಗೆ ತಿದ್ದುಪಡಿ ತಂದು ಹರಾಜು ಪ್ರಕ್ರಿಯೆಯನ್ನು ಜಾರಿಗೊಳಿ ಸಿದೆ.

 

ಈ ಜಾರಿಯ ನಂತರ ತಾಲ್ಲೂಕಿನ 110  ಮರಳು ನಿಕ್ಷೇಪಗಳಲ್ಲಿ 9 ಬ್ಲಾಕ್‌ಗಳನ್ನು ಮಾತ್ರ ಹರಾಜು ಮಾಡಿ 8 ಕೋಟಿ ಹರಾಜು ಮಾಡಲಾಗಿತ್ತು. ಎಲ್ಲಾ ನಿಕ್ಷೇಪಗಳನ್ನು ಹರಾಜು ಮಾಡಿದ್ದರೆ ಸರ್ಕಾರಕ್ಕೆ 100 ಕೋಟಿ ರೂಪಾಯಿ ಆದಾಯ ಬರುತ್ತಿತ್ತು. ಆದರೆ  ಅಧಿಕಾರಿಗಳು ಮರಳು ಮಾಫಿಯಾ ದಂಧೆ ನಡೆಸುವವರ ಜತೆ ಶಾಮೀಲಾಗಿ  ಆಡಳಿತಾತ್ಮಕ ದೋಷ ಗಳನ್ನು ತೋರುವ ನೆಪದಲ್ಲಿ ಮರಳು ನಿಕ್ಷೇಪಗಳು ಹರಾಜಾಗದಂತೆ ಮಾಡಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ  ಉಂಟು ಮಾಡಿದ್ದಾರೆ. ಇತ್ತ ತಾಲ್ಲೂಕಿನ ನದಿ ಪಾತ್ರಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಹೆಚ್ಚಾಗಿದ್ದು, ಕಾನೂನಿನ ಯಾವುದೇ ಭಯವಿಲ್ಲದೇ, ಸರ್ಕಾರದ ನೀತಿ ನಿಯಮಗಳನ್ನು ಗಾಳಿ ತೂರಿ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ.ತಾಲ್ಲೂಕಿನಿಂದ ಪ್ರತಿನಿತ್ಯ 500ಕ್ಕೂ ಅಧಿಕ ಲೋಡ್ ಮರಳು ಅಕ್ರಮವಾಗಿ ಸಾಗಾಣಿಕೆಯಾಗುತ್ತಿದ್ದು, ಸುಮಾರು 50 ಲಕ್ಷ ರೂಪಾಯಿಗಳು ನಷ್ಟವಾಗು ತ್ತಿದೆ. ಸರ್ಕಾರದ ಆಸ್ತಿ  ಕಾಪಾಡ ಬೇಕಾದ ಭೂ ಮತ್ತು ವಿಜ್ಞಾನ, ಕಂದಾಯ ಮತ್ತು ಪೊಲೀಸ್ ಇಲಾಖೆ ಗಳು ಈ ದಂಧೆಗೆ ಸಹಕಾರ ನೀಡುತ್ತಿವೆ. ಯಂತ್ರೋಪಕರಣಗಳನ್ನು ಬಳಸಬಾರ ದೆಂಬ ನ್ಯಾಯಾಲಯದ ಆದೇಶದ ನಡುವೆ ಯಂತ್ರಗಳ ಬಳಕೆಯಾಗುತ್ತಿದೆ ಎಂದು ಮುಖಂಡರಾದ ಪ್ರಭುಸ್ವಾಮಿ, ಜಯಣ್ಣ,  ಸುಬ್ಬಣ್ಣ, ಶ್ರೀನಿವಾಸ, ಆದಿತ್ಯ, ಆರೋಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.