ಬುಧವಾರ, ಏಪ್ರಿಲ್ 14, 2021
31 °C

ಅಕ್ರಮ ಮರಳು ಸಾಗಣೆ: ಏಳು ಲಾರಿ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಇಲ್ಲಿಯ ಟೋಲ್ ನಾಕಾ ಬಳಿ ಅಕ್ರಮ ಮರಳು ಸಾಗಿಸುತ್ತಿದ್ದ ಏಳು ಲಾರಿಗಳನ್ನು ವಶಕ್ಕೆ ತೆಗೆದುಕೊಂಡ ಲೋಕೋಪಯೋಗಿ ಅಧಿಕಾರಿಗಳು ಅವುಗಳನ್ನು ಪೊಲೀಸರಿಗೆ ಹಸ್ತಾಂತರಿಸಿದ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ.ಇಲಾಖೆಯ ಅಧಿಕಾರಿಗಳ ತಂಡ ಮರಳನ್ನು ಕೊಂಡೊಯ್ಯುತ್ತಿದ್ದ ಲಾರಿಗಳನ್ನು ತಡೆದು ಪರವಾನಗಿ ಪತ್ರ ಕೇಳಿದಾರೆ. ಅಗತ್ಯ ದಾಖಲೆಗಳು ಇಲ್ಲದ್ದರಿಂದ ಲಾರಿಗಳನ್ನು ವಶಕ್ಕೆ ಪಡೆ ಯಲಾಗಿದೆ. ಮರಳನ್ನು ಈ ಲಾರಿಗಳು ದಾವಣಗೆರೆ ಜಿಲ್ಲೆ ಹರಿಹರದಿಂದ ನಗರಕ್ಕೆ ತರುತ್ತಿದ್ದರು ಎಂದು ಮೂಲಗಳು ತಿಳಿಸಿವೆ.ಇಲಾಖೆಯ ಅಕ್ರಮ ಸಾಗಣೆ ಮಾಡುವ ಲಾರಿಗಳನ್ನು ವಶಕ್ಕೆ ತೆಗೆದುಕೊಳ್ಳುತ್ತಿರುವುದು ಇದು ಎರಡನೇ ಬಾರಿ. ಕಳೆದ ಮೇ 24ರಂದು ಜಿಲ್ಲಾಧಿಕಾರಿ ದರ್ಪಣ ಜೈನ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಯಲ್ಲಿ ಕೆಲ ಲಾರಿಗಳನ್ನು ವಶಕ್ಕೆ ಪಡೆಯಲಾಗಿದ್ದನ್ನು ಇಲ್ಲಿ ಸ್ಮರಿಸ ಬಹುದು.ವಶಕ್ಕೆ ಪಡೆಯಲಾದ ಏಳು ಲಾರಿಗಳಲ್ಲಿ ಆರು ಲಾರಿಗಳವರು ಪರವಾನಗಿ ಪತ್ರಗಳನ್ನು ಹಾಜರು ಪಡಿಸಿದ್ದಾರೆ. ಐದು ಲಾರಿಗಳು ಗದಗ ಜಿಲ್ಲೆಯ ಮುಂಡರಗಿ ಹಾಗೂ ಒಂದು ಶಿರಹಟ್ಟಿಗೆ ಸೇರಿದ್ದೆಂದು ಜಿಲ್ಲಾಧಿಕಾರಿ ಜೈನ್ ತಿಳಿಸಿದ್ದಾರೆ.ಹಾಜರುಪಡಿಸಲಾದ ಶಿರಹಟ್ಟಿಗೆ ಸೇರಿದ ಲಾರಿಯ ಪರವಾನಗಿ ಪತ್ರ ಅಸಲಿ ಆಗಿದ್ದು, ಮುಂಡರಗಿ ಲಾರಿಗಳ ಪಾಸುಗಳು ಖೊಟ್ಟಿಯಾಗಿವೆ. ಬುಧವಾರದವರೆಗೆ ಅಧಿಕಾರಿಗಳು ಈ ಪಾಸುಗಳ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಎಲ್ಲ ಏಳೂ ಲಾರಿಗಳನ್ನು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಇಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.