ಅಕ್ರಮ ಮರಳು ಸಾಗಣೆ ತಡೆಗೆ ಕ್ರಮ: ಡಿಸಿ
ಧರ್ಮಪುರ: ಅಕ್ರಮ ಮರಳು ಸಾಗಾಣಿಕೆ ಮತ್ತು ಸಂಗ್ರಹಣೆ ತಡೆಯಲು ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದು, ವಿವಿಧ ಇಲಾಖೆ ಅಧಿಕಾರಿಗಳ ಜಾಗೃತ ದಳದ ತಂಡ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ ತಿಳಿಸಿದರು.
ಸಮೀಪದ ಬುರುಡುಕುಂಟೆ, ಹೊಸಹಳ್ಳಿ ಮತ್ತು ಶಿಡ್ಲಯ್ಯನಕೋಟೆ ಬಳಿ ಹರಿಯುವ ವೇದಾವತಿ ನದಿ ತಟದಲ್ಲಿ ನಿರಂತರವಾಗಿ ಮರಳು ದಂಧೆ ನಡೆಯುತ್ತಿರುವ ವಿಷಯ ತಿಳಿದ ಅವರು, ವಿವಿಧ ಅಧಿಕಾರಿಗಳೊಂದಿಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
ಈಗಾಗಲೇ ನದಿ ತಟದಲ್ಲಿ ಅಕ್ರಮವಾಗಿ ಮರಳು ದಂಧೆಯಿಂದ ಸಾಕಷ್ಟು ತೊಂದರೆ ಆಗಿದೆ. ಪ್ರಭಾವಿ ವ್ಯಕ್ತಿಗಳು ನಿರಂತರ ಈ ದಂಧೆಯಲ್ಲಿ ತೊಡಗಿರುವುದು ಕೇಳಿ ಬಂದಿದೆ. ಅದಕ್ಕಾಗಿ ನದಿ ತಟದಲ್ಲಿ ಸುತ್ತಲೂ ಟ್ರೆಂಚಿಂಗ್ ಹೊಡೆಸಲಾಗುವುದು. ಅಲ್ಲದೇ ಮರಳು ಸಾಗಣೆಯಲ್ಲಿ ತೊಡಗುವ ಟ್ರ್ಯಾಕ್ಟರ್ಗಳನ್ನು ವಶಪಡಿಸಿಕೊಂಡು ಕ್ರಿಮಿನಲ್ ದೂರು ದಾಖಲು ಮಾಡಿ ಎಂದು ಆರ್ಟಿಒ ಅವರಿಗೆ ನಿರ್ದೇಶನ ನೀಡಿದರು.
ಅಕ್ರಮ ಮರಳು ಸಾಗಾಣಿಕೆ ಮತ್ತು ಸಂಗ್ರಹಣೆ ಮಾಡುವುದರ ಬಗ್ಗೆ ಮಾಹಿತಿ ಕಂಡು ಬಂದರೆ ತಕ್ಷಣ ಜಾಗೃತ ದಳದವರಿಗೆ ತಿಳಿಸಲು ನಾಗರಿಕರಿಗೆ ಮನವರಿಕೆ ಮಾಡಿದರು. ಅಗತ್ಯಬಿದ್ದರೆ ಪೊಲೀಸರ ನೆರವು ಪಡೆಯಿರಿ ಎಂದರು.
ಪರಿಶೀಲನೆಯ ಸಂದರ್ಭದಲ್ಲಿ ಪ್ರೊಬೆಷನ್ ಡಿಸಿ ಕಾರ್ಯರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕ ನರಸಿಂಹಮೂರ್ತಿ, ತಹಶೀಲ್ದಾರ್ ತಿಪ್ಪೇಸ್ವಾಮಿ, ಸಿಪಿಐ ರೋಷನ್ ಜಮೀರ್, ಪಿಎಸ್ಐ ಚಿದಾನಂದಮೂರ್ತಿ, ಪಾಲಭಾವಿ ಅಧಿಕಾರಿಗಳಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.