ಅಕ್ರಮ ಮರಳು ಸಾಗಣೆ: 30 ಲಾರಿಗಳ ವಶ

7

ಅಕ್ರಮ ಮರಳು ಸಾಗಣೆ: 30 ಲಾರಿಗಳ ವಶ

Published:
Updated:

ಮುಳಬಾಗಲು: ತಾಲ್ಲೂಕಿನಲ್ಲಿ ನಡೆ ಯುತ್ತಿರುವ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮುಳ ಬಾಗಲು ಪೊಲೀಸರು ಸೋಮವಾರ ಮೂವತ್ತು ಲಾರಿಗಳನ್ನು ವಶಪಡಿಸಿ ಕೊಂಡರು.ತಾಲ್ಲೂಕಿನಾದ್ಯಂತ ನಡೆದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಬೆಂಗಳೂರಿನ ಕಡೆಗೆ ಸಾಗುತ್ತಿದ್ದ ಸುಮಾರು ಮೂವತ್ತು ಲಾರಿಗಳನ್ನು ವಶಪಡಿಸಿ ಕೊಳ್ಳಲಾಯಿತು ಎಂದು ಪಿಎಸ್‌ಐ ಬಸವರಾಜ್ ತಿಳಿಸಿದ್ದಾರೆ.ಸರ್ಕಾರವು ಈಚೆಗೆ ಲೋಕೋಪಯೋಗಿ ಇಲಾಖೆಗೆ ಮರಳು ದಂಧೆ ನಿಲ್ಲಿಸಲು ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದರೂ ಮರಳು ದಂಧೆ ನಿಂತಿಲ್ಲವಾದ್ದರಿಂದ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry