ಅಕ್ರಮ ಮರಳು ಸಾಗಣೆ: 7 ಟ್ರ್ಯಾಕ್ಟರ್ ವಶ

ಮಂಗಳವಾರ, ಜೂಲೈ 23, 2019
25 °C

ಅಕ್ರಮ ಮರಳು ಸಾಗಣೆ: 7 ಟ್ರ್ಯಾಕ್ಟರ್ ವಶ

Published:
Updated:

ಕೊಳ್ಳೇಗಾಲ: ಅಕ್ರಮವಾಗಿ ಸಾಗಣೆ ಮಾಡಲು ಸಂಗ್ರಹಿಸಿದ್ದ ಮರಳು ಕೇಂದ್ರದ ಮೇಲೆ ತಾಲ್ಲೂಕು ದಂಡಾಧಿಕಾರಿ ಸುರೇಶ್‌ಕುಮಾರ್ ಕಂದಾಯ ಸಿಬ್ಬಂದಿಯೊಡನೆ ಮಂಗಳವಾರ ರಾತ್ರಿ ಅನಿರೀಕ್ಷಿತ ದಾಳಿ ನಡೆಸಿದರು.ತಾಲ್ಲೂಕಿನ ಸರಗೂರು ಗ್ರಾಮದಲ್ಲಿ ಕಾವೇರಿ ನದಿಯಿಂದ ಎತ್ತಿನಗಾಡಿಗಳ ಮೂಲಕ ಮರಳನ್ನು ಸಂಗ್ರಹಿಸಿ ನಂತರ ಕತ್ತಲಾಗುತ್ತಿದ್ದಂತೆ ಲಾರಿ ಮೂಲಕ ಬೆಂಗಳೂರು ಮತ್ತಿತರ ಕಡೆಗೆ ಮರಳನ್ನು ಕಾನೂನು ಬಾಹಿರವಾಗಿ ಸಾಗಣೆಮಾಡುತ್ತಿರುವ ಬಗ್ಗೆ ದೊರೆತ ಖಚಿತ ವರ್ತಮಾನದ ಮೇರೆ ತಹಶೀಲ್ದಾರ್ ಬುಧವಾರ ಸರಗೂರು ಗ್ರಾಮದ ಮರಳು ಸಂಗ್ರಹ ಕೇಂದ್ರದ ಮೇಲೆ ದಾಳಿ ನಡೆಸಿದರು.7 ಟ್ರ್ಯಾಕ್ಟರ್ ಮತ್ತು 7 ಲಾರಿಯಷ್ಟು ಮರಳು ಸಂಗ್ರಹ ವಶಕ್ಕೆ ತೆಗೆದುಕೊಂಡರು. ವಶಪಡಿಸಿಕೊಂಡ ಮರಳನ್ನು ಬುಧವಾರ ತಾಲ್ಲೂಕು ಕಚೇರಿ ಆವರಣಕ್ಕೆ ಸಾಗಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry