ಗುರುವಾರ , ಮೇ 13, 2021
39 °C

ಅಕ್ರಮ ಮರಳು ಸಾಗಾಣಿಕೆ ನಿಯಂತ್ರಣಕ್ಕೆ ಮತ್ತೊಂದು ಹೆಜ್ಜೆ:ಶರಾವತಿ ಮರಳಿಗೆ ಇ ಪರವಾನಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸನಗರ: ತಾಲ್ಲೂಕಿನಾದ್ಯಂತ ಶರಾವತಿ ನದಿ ತೀರದ ಅಕ್ರಮ ಮರಳು ಸಾಗಾಣಿಕೆ ನಿಯಂತ್ರಿಸಲು ಲೋಕೋಪಯೋಗಿ ಇಲಾಖೆ ಮಂಗಳವಾರದಿಂದ ಅಂತರ್ಜಾಲದ ಮೂಲಕ `ಇ~ ಮರಳು ಪರವಾನಗಿ ವಿತರಿಸಲು ಆರಂಭಿಸಿದೆ.ಮರಳು ಪರ್ಮಿಟ್‌ಗೆ `ಇ~ ವ್ಯವಸ್ಥೆಯನ್ನು ಮಂಗಳೂರಿನ ಐ ಸರ್ಚ್ ಕಂಪೆನಿಯು ಅನುಷ್ಠಾನಗೊಳಿಸುತ್ತಿದೆ. ಇದರಲ್ಲಿ ಸುಮಾರು 120 ಲಾರಿಗಳನ್ನುಆನ್‌ಲೈನ್ ರಿಜಿಸ್ಟ್ರೇಷನ್ ಮಾಡಲಾಗಿದೆ ಎಂದು ಸಂಸ್ಥೆ ವ್ಯವಸ್ಥಾಪಕರು ತಿಳಿಸಿದರು.ಮರಳು ತುಂಬಿದ ಲಾರಿಯ ಚಲನ ವಲನ ನಿಗಾ ಇಡಲು ಜಿಪಿಎಸ್(ಗ್ಲೋಬಲ್ ಪೊಸಿಷನ್ ಸಿಸ್ಟಂ) ಅನ್ನು ಅಳವಡಿಸಲಾಗಿದೆ. ಪ್ರತಿ ಕ್ಯುಬಿಕ್ ಮೀಟರ್ ಮರಳಿಗೆ ್ಙ 300 ಹಣವನ್ನು ಡಿಡಿ ರೂಪದಲ್ಲಿ ತುಂಬಿದ ನಂತರ, 24 ಗಂಟೆಗಳ ಅವಧಿಯ ಪರ್ಮಿಟ್ ನೀಡಲಾಗುವುದು. ಜಿಲ್ಲೆಯೊಳಗೆ ಮಾತ್ರ ಸರಬರಾಜು ಮಾಡಲು ಅವಕಾಶ ಇದೆ  ಎಂದು `ಪ್ರಜಾವಾಣಿ~ಗೆ ತಿಳಿಸಿದರು.ದುಬಾರಿ ಆಗಲಿದೆ ಮರಳುಮಣ್ಣು ಮಿಶ್ರಿತ ಅಲ್ಲದ ಶರಾವತಿ ತೀರದ ಶುದ್ಧ ಮರಳಿಗೆ ಜಿಲ್ಲೆಯಲ್ಲಿ ಒಳ್ಳೆಯ ಬೇಡಿಕೆ ಇದೆ. ಆದರೆ, ಈಗಿನ ಪದ್ಧತಿಯಂತೆ ಒಂದು ಟಿಪ್ಪರ್ ಮರಳಿಗೆ ಪರ್ಮಿಟ್ ಹಣ  ್ಙ 1,200, ಲಾರಿಗೆ ಮರಳು ತುಂಬಲು ಕೂಲಿ  ್ಙ 800, (ಜೆಸಿಬಿ ಬಳಕೆ ನಿಷೇಧಿಸಿದೆ) ಡೀಸೆಲ್, ಲಾರಿ ಬಾಡಿಗೆ, ಇತರ ಖರ್ಚು ಅಂತ ಲಾಭಕ್ಕಿಂತ ನಷ್ಟ ಆಗುವ ಸಂಭವ ಹೆಚ್ಚು ಎಂಬುದು ಲಾರಿ ಮಾಲೀಕರ ಕೊರಗು.  `ಇ~ ವ್ಯವಸ್ಥೆಯಿಂದ ಹೊಸನಗರ ಪಟ್ಟಣ ಸಮೀಪದ ಮರಳು ಬಂಕರ್‌ಗಳಿಂದ ಸರಬರಾಜು ಮಾಡುವ ಲಾರಿಗಳಿಗೆ ಹೆಚ್ಚು ನಿಗಾ ಇಡಲಾಗಿದೆ. ಹುಂಚಾ, ಕಡಸೂರು, ಸೋನಲೆ ಮರಳು ಬಂಕರ್‌ಗಳಿಂದ ತೀರ್ಥಹಳ್ಳಿಗೆ, ಶುಂಠಿಕೊಪ್ಪ, ಮಾರುತಿಪುರ, ಹರಿದ್ರಾವತಿಯಿಂದ ಸಾಗರ, ರಿಪ್ಪನ್‌ಪೇಟೆ ಭಾಗದ ಕುಮಧ್ವತಿ ನದಿಯಿಂದ ಶಿವಮೊಗ್ಗದ ಕಡೆಗೆ ಅವ್ಯವಾಹಿತವಾಗಿ ಕಡಿಮೆ ದರದಲ್ಲಿ ಮರಳು ಸಾಗುತ್ತಿದೆ.

 

ಅದನ್ನು ನಿಯಂತ್ರಿಸುವಲ್ಲಿ ಇಲಾಖೆಗಳು ವಿಫಲವಾಗಿದೆ ಎಂಬ ಇನ್ನೊಂದು ದೂರು ಜಿಪಿಎಸ್ ಪಡೆದ ಲಾರಿ ಮಾಲೀಕರದ್ದು.ಮಲೆನಾಡಿನಲ್ಲಿ ದಿನಗಟ್ಟಲೇ ವಿದ್ಯುತ್ ಸಂಪರ್ಕ ಕಡಿತ ಆಗುವ ಸಂದರ್ಭ ಹೆಚ್ಚು. ಮಳೆಗಾಲದ 6 ತಿಂಗಳು ಸಿಡಿಲು, ಗುಡುಗು ಬಂದರೆ ಬಿಎಸ್‌ಎನ್‌ಎಲ್ ಇಂಟರ್‌ನೆಟ್ ಸಂಪರ್ಕ ಸ್ಥಗಿತಗೊಳಿಸುತ್ತಾರೆ. ಇಂತಹ ಸಮಯದಲ್ಲಿ ಆನ್‌ಲೈನ್ ಪರ್ಮಿಟ್‌ಗಾಗಿ ದಿನಗಟ್ಟಲೇ ಕಾಯಬೇಕು. `ಇ~ ಮರಳು ಪರವಾನಗಿ ವ್ಯವಸ್ಥೆ ಸರಿ ಇಲ್ಲದಿದ್ದಾಗ ಈ ಹಿಂದಿನಂತೆ ಮ್ಯಾನ್ಯುಯೆಲ್ ಪದ್ಧತಿಯೂ ಪರ್ಯಾಯವಾಗಿ ಇರಬೇಕು ಎಂಬುದು ಲಾರಿ ಮಾಲೀಕರ ಆಗ್ರಹ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.