ಅಕ್ರಮ ರಫ್ತು: ಭಾರತೀಯರ ಬಂಧನ

ಸೋಮವಾರ, ಮೇ 20, 2019
30 °C

ಅಕ್ರಮ ರಫ್ತು: ಭಾರತೀಯರ ಬಂಧನ

Published:
Updated:

ಅಬುಜಾ, ನೈಜೀರಿಯಾ (ಪಿಟಿಐ):  ಸುಮಾರು 4,65,000 ಅಮೆರಿಕನ್ ಡಾಲರ್ ಮೌಲ್ಯದ ನಾಲ್ಕು ಪೆಟ್ಟಿಗೆ ಲೋಡ್‌ಗಳಷ್ಟು ತುಂಡು ಲೋಹಗಳನ್ನು ಅಕ್ರಮವಾಗಿ ರಫ್ತು ಮಾಡಲು ಯತ್ನಿಸಿದ ಆರೋಪದ ಮೇಲೆ 17 ಭಾರತೀಯರನ್ನು ಬಂಧಿಸಲಾಗಿದೆ.ಇವರಲ್ಲಿ ವಿಕಾಸ್ ದಾಸ್, ನರೇಶ್ ಗುಪ್ತ, ಧರ್ಮಿನ್ ಭಟ್ ಹಾಗೂ ನಿಲೇಶ್ ಮೋದಿ ಎಂಬ ನಾಲ್ವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ದಾಸ್ ಅವರು ಎವರೆಸ್ಟ್ ಮೆಟಲ್ ನೈಜೀರಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಇತರರು ನಿರ್ದೇಶಕರು.ಇವರೆಲ್ಲರಿಗೂ ತಲಾ 19,000 ಡಾಲರ್‌ಗಳ ಬಾಂಡ್ ಮೇಲೆ ಷರತ್ತಿನ ಜಾಮೀನು ನೀಡಿದೆ.

ಮುಂದಿನ ವಿಚಾರಣೆಯನ್ನು ಈ ತಿಂಗಳ 12 ಮತ್ತು 13ರವರೆಗೆ ಮುಂದೂಡಲಾಗಿದೆ.ಆರೋಪಿಗಳು ಆಫ್ತಿಕಾದ ಅತಿದೊಡ್ಡ ಸರಕು ಸಾಗಾಣಿಕೆ ಕೇಂದ್ರವಾದ ಲಾಗಾಸ್‌ನ ಅಪಾಪ ಕ್ವೇ ವಿಮಾನ ನಿಲ್ದಾಣದ ಮೂಲಕ ಹದಿನೈದು ದಿನಗಳ ಹಿಂದೆ ಈ ತುಂಡು ಲೋಹಗಳನ್ನು ರಫ್ತು ಮಾಡಲು ಯತ್ನಿಸಿದ್ದರು ಎನ್ನಲಾಗಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry