ಬುಧವಾರ, ಮೇ 12, 2021
24 °C

ಅಕ್ರಮ ಸಂಪಾದನೆಯಿಂದ ನೆಮ್ಮದಿ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಗೇರಿ: `ಅನ್ಯಾಯ, ಮೋಸ, ವಂಚನೆಯಿಂದ ಸಂಪಾದನೆ ಮಾಡಿದ ಹಣ, ಅಂತಸ್ತು, ಆಸ್ತಿಗಳಿಂದ ಜೀವನದಲ್ಲಿ ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಲು ಸಾಧ್ಯವಿಲ್ಲ~ ಎಂದು ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.

ಹೊರ ವರ್ತುಲ ರಸ್ತೆಯ ಮರಿಯಪ್ಪನ ಪಾಳ್ಯದಲ್ಲಿ ಗೌತಮಬುದ್ಧ ಟ್ರಸ್ಟ್‌ನವರು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಬೆಳ್ಳಿ ಕಿರೀಟ ಸನ್ಮಾನಕ್ಕೆ ಬದಲು ಮೈಸೂರು ಪೇಟದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

`ಅದ್ದೂರಿ ಸನ್ಮಾನ ನನಗೆ ಇಷ್ಟವಾಗುವುದಿಲ್ಲ~ ಎಂದು ಹೇಳಿದ ಅವರು, `ನನಗೆ ಕೊಡಲು ತಂದಿದ್ದ ಬೆಳ್ಳಿ ಕಿರೀಟವನ್ನು ಸಂಸ್ಥೆ ನಡೆಸುತ್ತಿರುವ ಉಚಿತ ಶಾಲೆಯ ಕಾರ್ಯಚಟುವಟಿಕೆಗಳಿಗೆ ಬಳಸಿ~ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, `ಜನರು ಕುಂಭಕರ್ಣನ ರೀತಿಯಲ್ಲಿ 5 ವರ್ಷಕ್ಕೆ ಒಂದು ಬಾರಿ ಎಚ್ಚರವಾದಂತೆ ಮತ ಹಾಕಿ, ಮತ್ತೆ ಇನ್ನು ಐದು ವರ್ಷಗಳವರೆಗೆ ನಿದ್ದೆ ಮಾಡುತ್ತಾರೆ. ಆಯ್ಕೆ ಮಾಡಿದ ಪ್ರತಿನಿಧಿ ಮಾಡುತ್ತಿರುವ ಕೆಲಸದ ಬಗ್ಗೆ ಎಚ್ಚರ ವಹಿಸದೇ ತಮಗೆ ತಾವೇ ಮೋಸ ಮಾಡಿಕೊಳ್ಳುತ್ತ್ದ್ದಿದೀರಿ~ ಎಂದು ಎಚ್ಚರಿಸಿದರು.

`ಟ್ರಸ್ಟ್ ವತಿಯಿಂದ ಒಂದು ಲಕ್ಷ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿರುವುದು ಒಳ್ಳೆಯ ಕೆಲಸ. ಹತ್ತು ಸಾವಿರ ವಿವಿಧ ಬಗೆಯ ಗಿಡಗಳನ್ನು ನೆಡಿ. ಇದರಿಂದ ಮಕ್ಕಳು, ಪ್ರಾಣಿ- ಪಕ್ಷಿಗಳಿಗೆ ಹಣ್ಣು ಹಂಪಲು, ನೆರಳು ಸಿಗುತ್ತದೆ~ ಎಂದು ಅವರು ಹೇಳಿದರು.

ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ಕೆಂಗಲ್ ಹನುಮಂತಯ್ಯ ಸ್ಮಾರಕ ಸಮಿತಿ ಅಧ್ಯಕ್ಷ ಬಿ.ಎಚ್.ಸುರೇಶ್, ನಟರಾದ ಮೂರ್ತಿ, ಜಗದೀಶ್, ಚಿಂತಕ ಗುರುಮೂರ್ತಿ ಗುರೂಜಿ, ಸಮಾಜ ಸೇವಕ ದಾಸೇಗೌಡ, ಶನೇಶ್ಚರ ಟ್ರಸ್ಟ್ ಅಧ್ಯಕ್ಷ ಅಂಜನ್ ಕುಮಾರ್, ಟ್ರಸ್ಟ್ ಅಧ್ಯಕ್ಷ ಗೌತಮ್ ವರ್ಮ ಮುಖಂಡ ಕಾಳಪ್ಪ ಇತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.