ಅಕ್ರಮ ಸಂಬಂಧಕ್ಕೆ ತಲೆದಂಡ

7

ಅಕ್ರಮ ಸಂಬಂಧಕ್ಕೆ ತಲೆದಂಡ

Published:
Updated:

ನ್ಯೂಯಾರ್ಕ್ (ಪಿಟಿಐ): ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ದೂಷಿಸಿ ಸಾಕ್ಷ್ಯಚಿತ್ರ ಮಾಡಿ ಸುದ್ದಿಯಾಗಿದ್ದ ಭಾರತೀಯ ಮೂಲದ ದಿನೇಶ್ ಡಿಸೋಜಾ ಅವರು ಅಕ್ರಮ ಸಂಬಂಧದ ಆರೋಪದ ಹಿನ್ನೆಲೆಯಲ್ಲಿ ಇಲ್ಲಿನ `ದಿ ಕಿಂಗ್ಸ್~ ಕಾಲೇಜಿನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.ಹೆಂಡತಿ ಎಂದು ಪರಿಚಯಿಸಿ ಬೇರೊಬ್ಬ ಮಹಿಳೆಯೊಂದಿಗೆ ಹೋಟೆಲ್‌ನಲ್ಲಿ ತಂಗಿದ್ದ ಆರೋಪ ಇವರ ಮೇಲಿದೆ. ಈ ಕುರಿತು ತನಿಖೆ ನಡೆಸುವುದಾಗಿ ಕಾಲೇಜು ಆಡಳಿತ ಮಂಡಳಿ ಪ್ರಕಟಿಸಿದ ಕೆಲವೇ ದಿನಗಳ ಬಳಿಕ ಇವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅಕ್ರಮ ಸಂಬಂಧ ಕಾಲೇಜಿನ ನಿಯಮಗಳಿಗೆ ವಿರುದ್ಧವಾದದ್ದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry