ಭಾನುವಾರ, ಏಪ್ರಿಲ್ 11, 2021
30 °C

ಅಕ್ರಮ: ಸಿಬ್ಬಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ರಕ್ಷಣಾ ಸಿಬ್ಬಂದಿಗಾಗಿ ಇರುವ ಮಾರಾಟ ಮಳಿಗೆಗೆ (ಕ್ಯಾಂಟಿನ್) ವಸ್ತುಗಳ ಖರೀದಿ ವ್ಯವಹಾರದಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಬ್ರಿಗೇಡಿಯರ್ ಹುದ್ದೆಗೆ ಸರಿಸಮಾನ ಸ್ಥಾನ  ಹೊಂದಿರುವ ಮಳಿಗೆ ವಿಭಾಗದ ಪ್ರಧಾನ ವ್ಯವಸ್ಥಾಪಕ ವಿಕಾಸ್ ರಂಜನ್‌ದಾಸ್ ಚೌಧರಿ ಸೇರಿ ನಾಲ್ವರನ್ನು ಸಿಬಿಐ ಬಂಧಿಸಿದೆ.ಭೂಸೇನೆ, ವಾಯು ಪಡೆ ಹಾಗೂ ನೌಕಾಪಡೆ ಸಿಬ್ಬಂದಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಳಿಗೆಗೆ ಪೂರೈಕೆ ಯಾಗುವ ವಸ್ತುಗಳಿಗೆ ಸಂಬಂಧಿಸಿ ದಂತೆ ಇರುವ ನಿರ್ದೇಶನಗಳನ್ನು ಉಲ್ಲಂಘಿಸಿ ಬೇರೆ ವಿತರಕರಿಂದ ಲಂಚ ಪಡೆದು ಅವರ ಉತ್ಪನ್ನಗಳನ್ನು ಮಾತ್ರ ಮಳಿಗೆಗೆ ಪೂರೈಕೆ ಮಾಡಲಾಗುತ್ತಿ ರುವುದನ್ನು ಹಾಗೂ ಖರೀದಿ ವ್ಯವಹಾ ರದಲ್ಲಿ ವಸ್ತುಗಳ ದರ ನಿಗದಿ ಮಾಡು ವಲ್ಲೂ ಏರುಪೇರು ಮಾಡಿರುವುದನ್ನು ಸಿಬಿಐ ಪತ್ತೆ ಹಚ್ಚಿದೆ.ಸೇನಾ ಸೂಚಿತ ಪಟ್ಟಿಯಲ್ಲಿರದ ಅನಧಿಕೃತ ಸಂಸ್ಥೆಯ ವ್ಯಕ್ತಿಯಿಂದ ಚೌಧರಿ  1.5 ಲಕ್ಷ ರೂ ಲಂಚ ಪಡೆಯುತ್ತಿರುವ ಸಂದರ್ಭದಲ್ಲೇ ಸಿಬಿಐ ಅವರನ್ನು ಬಂಧಿಸಿದೆ. ಇದೇ ವೇಳೆ ದೇಶದ ವಿವಿಧೆಡೆ ಇರುವ 20 ಸೇನಾ ಮಾರಾಟ ಮಳಿಗೆಗಳ ನಿರ್ವಹಣೆ ಜವಾಬ್ದಾರಿ ಹೊತ್ತ ಅಧಿಕಾರಿಗಳ ಮನೆಗಳ ಮೇಲೂ ಸಿಬಿಐ ದಾಳಿ ಮಾಡಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.