ಅಕ್ರಮ ಹಣದ ಹೊರ ಹರಿವಿಗೆ ತಡೆ-ಪ್ರಣವ್

7

ಅಕ್ರಮ ಹಣದ ಹೊರ ಹರಿವಿಗೆ ತಡೆ-ಪ್ರಣವ್

Published:
Updated:

ನವದೆಹಲಿ (ಪಿಟಿಐ): ಕಳೆದ ಹಣಕಾಸು ವರ್ಷದಲ್ಲಿ  ಸುಮಾರು 66 ಸಾವಿರ ಕೋಟಿಗಳಷ್ಟು ಮೊತ್ತದ ಕಪ್ಪು ಹಣದ ಹೊರ ಹರಿವು ತಪ್ಪಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.



ಬಹುರಾಷ್ಟ್ರೀಯ ಕಂಪೆನಿಗಳು, ತೆರಿಗೆ ತಪ್ಪಿಸಿ, ಕಾನೂನುಬಾಹಿರವಾಗಿ 66 ಸಾವಿರ ಕೋಟಿಗಳಷ್ಟು ಹಣವನ್ನು ದೇಶದಿಂದ ಹೊರಗೆ ಸಾಗಿಸುವ ಯತ್ನದಲ್ಲಿದ್ದವು. ತೆರಿಗೆ ಅಧಿಕಾರಿಗಳು ಈ ಪ್ರಯತ್ನವನ್ನು ತಪ್ಪಿಸಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.



ಕೇಂದ್ರ ನೇರ ತೆರಿಗೆ ಸಲಹಾ ಮಂಡಳಿ (ಸಿಡಿಟಿಎಸಿ) ಇಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಬಹುರಾಷ್ಟ್ರೀಯ ಕಂಪೆನಿಗಳು ಸರಕು ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ಕಡಿಮೆ ವರ್ಗಾವಣೆ ಶುಲ್ಕ ಪಾವತಿಸಿ ದೊಡ್ಡ ಪ್ರಮಾಣದ ತೆರಿಗೆ ವಂಚಿಸಿದ್ದವು. ಅಧಿಕಾರಿಗಳು ಇದನ್ನು ಪತ್ತೆ  ಹೆಚ್ಚಿದ್ದಾರೆ.

 

ಇದರಿಂದ ದೇಶಕ್ಕೆ ಸುಮಾರು 66,085 ಕೋಟಿಗಳಷ್ಟು ತೆರಿಗೆ ವರಮಾನ ಉಳಿದಿದೆ ಎಂದರು.ಬಹುರಾಷ್ಟ್ರೀಯ ಕಂಪೆನಿಗಳು ದೊಡ್ಡ ಪ್ರಮಾಣದಲ್ಲಿ ತೆರಿಗೆ ತಪ್ಪಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮುಂದಿನ ಬಜೆಟ್‌ನಲ್ಲಿ ಸುಧಾರಿತ ದರ ಒಪ್ಪಂದ (ಎಪಿಎ) ಜಾರಿಗೊಳಿಸುವ ಕುರಿತು ಚಿಂತಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry