ಶುಕ್ರವಾರ, ನವೆಂಬರ್ 22, 2019
21 °C

ಅಕ್ರಮ ಹಣ ಸಾಗಣೆ ಮೂವರ ಬಂಧನ

Published:
Updated:

ಸಿದ್ದಾಪುರ: ಕಾರಿನಲ್ಲಿ ಅನಧಿಕೃತವಾಗಿ ಸಾಗಿಸಲಾಗುತ್ತಿದ್ದ ಹಣವನ್ನು ತಾಲ್ಲೂಕಿನ ಚೂರಿಕಟ್ಟೆ ಸಮೀಪ ಗುರುವಾರ ವಶಪಡಿಸಿಕೊಂಡಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ರಿಪ್ಪನಪೇಟೆಯ ಬಸವರಾಜ ತಳಜಿರಾವ್), ರಿಪ್ಪನಪೇಟೆಯ ವಡಗೆರೆಯ ಪರಶುರಾಮ ಮುಕುಂದ ಸಿಂಗ್ , ಹೊಸನಗರ ತಮ್ಮಡಿಕೊಪ್ಪದ ಸತೀಶ ಭೈರೋಜಿರಾವ್ ಬಂಧಿತ ಆರೋಪಿಗಳಾಗಿದ್ದಾರೆ. ಚುನಾವಣೆಯ ಫ್ಲೈಯಿಂಗ್ ಸ್ಕ್ವಾಡ್ ಮತ್ತು ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ   ಸಾಗರ ಕಡೆಯಿಂದ ಬಂದ ಸ್ವಿಫ್ಟ್ ಕಾರನ್ನು ತಡೆದು ತಪಾಸಣೆ ನಡೆಸಿದಾಗ, ಕಾರಿನ ಡ್ಯಾಶ್ ಬೋರ್ಡ್‌ನಲ್ಲಿ ರೂ 3 ಲಕ್ಷ ಮೊತ್ತದ ನಗದು ಕಂಡು ಬಂದಿತು. ಈ ಹಣದ ಬಗ್ಗೆ ಆರೋಪಿಗಳು ಸಮರ್ಪಕ ವಿವರಣೆ ನೀಡಲಿಲ್ಲ. ಆದ್ದರಿಂದ ಕಾರು ಹಾಗೂ ಹಣವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿಎಸ್‌ಐ ದಿನೇಶಕುಮಾರ ತನಿಖೆ ನಡೆಸಿದ್ದಾರೆ.

ಪ್ರತಿಕ್ರಿಯಿಸಿ (+)