ಮಂಗಳವಾರ, ನವೆಂಬರ್ 19, 2019
29 °C
ಪಂಚರಂಗಿ

ಅಕ್ಷಯ್ ಈಗ ಭಾನುವಾರವೂ ಬ್ಯುಸಿ

Published:
Updated:
ಅಕ್ಷಯ್ ಈಗ ಭಾನುವಾರವೂ ಬ್ಯುಸಿ

ಯಾವ ಕಾರಣಕ್ಕೂ ಭಾನುವಾರ ಕೆಲಸ ಮಾಡುವುದಿಲ್ಲ ಎಂದು ತಾವೇ ಹಾಕಿಕೊಂಡಿದ್ದ ನಿಯಮವನ್ನು ಅಕ್ಷಯ್ ಖಾನ್ ಮುರಿದಿದ್ದಾರೆ. ಮಿಲನ್ ಲುಥಾರಿಯಾ ಅವರ `ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ 2' ಚಿತ್ರೀಕರಣದಲ್ಲಿ ಈಗ ಅಕ್ಷಯ್ ಭಾನುವಾರವೂ ಪಾಲ್ಗೊಳ್ಳುತ್ತಿದ್ದಾರೆ.ಏಳು ವರ್ಷದ ಹಿಂದೆ ಅಕ್ಷಯ್ ಕುಮಾರ್ ಭಾನುವಾರವನ್ನು ಸಂಪೂರ್ಣವಾಗಿ ಕುಟುಂಬದವರಿಗೆ ಮೀಸಲಿಡಲು ತೀರ್ಮಾನಿಸಿದ್ದರು. ಅಲ್ಲಿಂದ ಇಲ್ಲಿಯವರೆಗೂ ಅವರು ಪ್ರತಿ ಭಾನುವಾರವನ್ನು ತಮ್ಮ ಮಡದಿ ಹಾಗೂ ಮಕ್ಕಳೊಂದಿಗೆ ಕಳೆಯುತ್ತಿದ್ದಾರೆ. 2006ರಲ್ಲಿ `ಭಾಗಮ್ ಭಾಗ್' ಚಿತ್ರಕ್ಕಾಗಿ ಭಾನುವಾರವೂ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಅಕ್ಷಯ್ ಇದೀಗ ಈ ಚಿತ್ರಕ್ಕಾಗಿ ಮತ್ತೆ ಕೆಲಸ ಮಾಡುವ ಮನಸ್ಸು ಮಾಡಿದ್ದಾರೆ.ಮಿಲನ್ ಅವರಿಗೆ ಕಳೆದ ಮೂರು ದಿನಗಳಿಂದ ಹುಷಾರಿಲ್ಲದ ಕಾರಣ ಅಕ್ಷಯ್ ಭಾನುವಾರ ಕೂಡ ಚಿತ್ರೀಕರಣದಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದರು. ಚಿತ್ರೀಕರಣದ ದಿನಾಂಕ ಮುಂದೂಡುವುದರಿಂದ ನಷ್ಟ ಅನುಭವಿಸುತ್ತಿರುವ ನಿರ್ಮಾಪಕರಿಗಾಗಿ ಅಕ್ಷಯ್ ಒಂದು ವಾರದ ಮಟ್ಟಿಗೆ ತಮ್ಮ ನಿಯಮವನ್ನು ಮುರಿದಿದ್ದಾರೆ. ಅಕ್ಷಯ್, ಇಮ್ರಾನ್ ಖಾನ್ ಹಾಗೂ ಸೋನಾಕ್ಷಿ ಸಿನ್ಹಾ ನಟಿಸುತ್ತಿರುವ ಈ ಚಿತ್ರಕ್ಕಾಗಿ ಭಾನುವಾರ ಬೆಳಿಗ್ಗೆ 7 ಗಂಟೆಗೆ ಚಿತ್ರೀಕರಣ ಆರಂಭಿಸಿದ ತಂಡ ಸೂರ್ಯ ಮುಳುಗುವವರೆಗೂ ಚಿತ್ರೀಕರಣದಲ್ಲಿ ಮುಳುಗಿತ್ತು.ಈ ಚಿತ್ರವು 2010ರಲ್ಲಿ ತೆರೆಕಂಡ `ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ' ಚಿತ್ರದ ಮುಂದುವರಿದ ಭಾಗವಾಗಿದ್ದು, ಏಕ್ತಾ ಹಾಗೂ ಶೋಭಾ ಕಪೂರ್ ನಿರ್ಮಿಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)