ಅಕ್ಷರ-ಆರಕ್ಷಕ ಯೋಜನೆ: 56 ಸಾವಿರ ಮನೆಗಳಿಗೆ ಪೊಲೀಸರ ಭೇಟಿ

ಸೋಮವಾರ, ಜೂಲೈ 22, 2019
27 °C

ಅಕ್ಷರ-ಆರಕ್ಷಕ ಯೋಜನೆ: 56 ಸಾವಿರ ಮನೆಗಳಿಗೆ ಪೊಲೀಸರ ಭೇಟಿ

Published:
Updated:

ಮೈಸೂರು: ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಹಿನ್ನೆಲೆಯಲ್ಲಿ ನಗರ ಪೊಲೀಸರು ಆಯೋಜಿಸಿದ್ದ ಅಕ್ಷರ-ಆರಕ್ಷಕ ಯೋಜನೆಯಡಿ ಸಮುದಾಯ ಪೊಲೀಸರು 9 ದಿನಗಳಲ್ಲಿ 56,081 ಮನೆಗಳಿಗೆ  ಭೇಟಿ ನೀಡಿದ್ದಾರೆ.`ಮೇ 23ರಂದು ಅಕ್ಷರ-ಆರಕ್ಷಕ ಯೋಜನೆಗೆ ಚಾಲನೆ ನೀಡಲಾಯಿತು. ಇದುವರೆಗೆ 3671 ಸಮುದಾಯ ಪೊಲೀಸ್ ಅಧಿಕಾರಿ (ಸಿಪಿಓ) 56,081 ಮನೆಗಳಿಗೆ ಭೇಟಿ ನೀಡಿದ್ದಾರೆ. ಶಾಲೆಗೆ ಸೇರಿರದ 6 ವರ್ಷಕ್ಕಿಂತ ಮೇಲ್ಪಟ್ಟ 12 ಮಕ್ಕಳು, ಶಾಲೆ ಬಿಟ್ಟ 15 ಕ್ಕಿಂತ ಕಡಿಮೆ ವಯಸ್ಸಿನ 67 ಮಕ್ಕಳು ಹಾಗೂ 6  ಬಾಲ ಕಾರ್ಮಿಕರನ್ನು ಪತ್ತೆ ಮಾಡಲಾಗಿದೆ~ ಎಂದು ನಗರ ಪೊಲೀಸ್ ಕಮಿಷನರ್ ಸುನಿಲ್ ಅಗರವಾಲ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ಪೊಲೀಸ್ ಸಿಬ್ಬಂದಿ ಹೊರತುಪಡಿಸಿ ಮೇಲುಸ್ತುವಾರಿ ಅಧಿಕಾರಿಗಳಾದ ಎಎಸ್‌ಐ, ಎಸ್‌ಐ ಮತ್ತು ಇನ್ಸ್‌ಪೆಕ್ಟರ್‌ಗಳು ಮನೆಗಳಿಗೆ ಭೇಟಿ ನೀಡಿದ್ದಾರೆ. ಇನ್ಸ್‌ಪೆಕ್ಟರ್‌ಗಳು 882 ಮನೆ, ಎಸ್‌ಐಗಳು 1902 ಮನೆ ಹಾಗೂ ಎಎಸ್‌ಐಗಳು 3826 ಮನೆಗಳಿಗೆ ಭೇಟಿ ನೀಡಿದ್ದಾರೆ. ಇದು ಸಮುದಾಯ ಪೊಲೀಸರನ್ನು ಹೊರತುಪಡಿಸಿ ಮೇಲುಸ್ತುವಾರಿ ಅಧಿಕಾರಿಗಳು ಹೆಚ್ಚುವರಿ ಸೇವೆ ಮಾಡಿದ್ದಾರೆ~ ಎಂದು ಮಾಹಿತಿ ನೀಡಿದರು.`ನಗರದಲ್ಲಿ ಒಟ್ಟು 20 ಪೊಲೀಸ್ ಠಾಣೆಗಳ ಪೈಕಿ 16 ಪೊಲೀಸ್ ಠಾಣೆಗಳು ಕಾನೂನು ಮತ್ತು ಸುವ್ಯವಸ್ಥೆ ನೋಡಿಕೊಳ್ಳುತ್ತವೆ. ಬಾರ್ತಿ ಏರ್‌ಟೆಲ್  ಲಿಮಿಟೆಡ್ ಕಂಪೆನಿ ದೂರವಾಣಿ ಪಾಲುದಾರರಾಗಿದ್ದು, ಠಾಣೆಗೆ ತಲಾ 50 ಮೊಬೈಲ್‌ಗಳಂತೆ ಒಟ್ಟು 16 ಠಾಣೆಗಳಿಗೆ 800 ಮೊಬೈಲ್‌ಗಳನ್ನು ನೀಡಿದ್ದಾರೆ.

 

ಮೊಬೈಲ್ ಸಂಖ್ಯೆಗಳು ಒಂದು ಗುಂಪಿಗೆ ಸೇರಿದ್ದು, ಇದರ ಮಾಹಿತಿ ಮನೆಗಳಿಗೆ ಅಂಟಿಸಲಾಗುವ ಸ್ಟಿಕರ್‌ನಲ್ಲಿ ಇರುತ್ತದೆ. 1.60 ಲಕ್ಷ ಸ್ಟಿಕರ್‌ಗಳು ಸಿದ್ಧವಾಗಿವೆ. 8861305001 ರಿಂದ ಮೊಬೈಲ್ ಸಂಖ್ಯೆ ಆರಂಭವಾಗಿ 8861305801 ಇಲ್ಲಿಗೆ ಅಂತ್ಯವಾಗುತ್ತದೆ~ ಎಂದು ತಿಳಿಸಿದರು.ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್ ಮಾತನಾಡಿ, `ಪೊಲೀಸರು- ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯ ಬೆಸೆಯಲು ಅಕ್ಷರ-ಆರಕ್ಷಕ ಯೋಜನೆ ಸಹಕಾರಿಯಾಗಲಿದೆ. ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಹಾಗೂ ಚಕ್ಕರ್ ಹಾಕಿದವರನ್ನು ಶಾಲೆಗೆ ಕರೆದೊಯ್ಯುವುದು ಕಾರ್ಯಕ್ರಮದ  ಉದ್ದೇಶವಾಗಿದೆ. ಅಲ್ಲದೆ ಪೊಲೀಸ್ ಇಲಾಖೆಗೆ ಕುಟುಂಬದವರ ಬಗ್ಗೆ ಮಾಹಿತಿ ದೊರಕಿದಂತಾಗುತ್ತದೆ~ ಎಂದು ತಿಳಿಸಿದರು.ಠಾಣಾಧಿಕಾರಿಗಳಿಗೆ ಸಾಂಕೇತಿ ಕವಾಗಿ ಮೊಬೈಲ್‌ಗಳನ್ನು ವಿತರಣೆ ಮಾಡಲಾಯಿತು. ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಬಸವರಾಜ ಮಾಲಗತ್ತಿ, ಡಿಸಿಪಿ (ಅಪರಾಧ ಮತ್ತು ಸಂಚಾರ) ಪಿ.ರಾಜೇಂದ್ರ ಪ್ರಸಾದ್, ಭಾರ್ತಿ ಏರ್‌ಟೆಲ್ ಲಿಮಿಟೆಡ್‌ನ ಕರ್ನಾಟಕ ವಿಭಾಗದ ಸಿಇಓ ರೋಹಿತ್ ಮಲ್ಹೋತ್ರ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry