ಅಕ್ಷರ ದಾಸೋಹ ಸಿಬ್ಬಂದಿ ಕಡಿತಕ್ಕೆ ವಿರೋಧ

7

ಅಕ್ಷರ ದಾಸೋಹ ಸಿಬ್ಬಂದಿ ಕಡಿತಕ್ಕೆ ವಿರೋಧ

Published:
Updated:ಚಿತ್ರದುರ್ಗ: ಮಕ್ಕಳ ಸಂಖ್ಯೆ ಕಡಿಮೆ ಯಾದಾಗ ಅಕ್ಷರ ದಾಸೋಹ ಯೋಜನೆಯ ಕೆಲಸಗಾರರನ್ನು ತೆಗೆದುಹಾಕುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಕೆಲಸಗಾರರ ಸಂಘದ (ಸಿಐಟಿಯು) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಗುರು ವಾರ ಪ್ರತಿಭಟನೆ ನಡೆಯಿತು.ರಾಜ್ಯದಲ್ಲಿ ಯಶಸ್ವಿಯಾಗಿರುವ ಅಕ್ಷರ ದಾಸೋಹ ಯೋಜನೆಗೆ ಶ್ರಮಿಸುತ್ತಿರುವ ಸಿಬ್ಬಂದಿಯ ಗೌರವ ಧನವನ್ನು ಸರ್ಕಾರ ಹೆಚ್ಚಿಸಿಲ್ಲ. ಸಿಬ್ಬಂದಿಯನ್ನು ಕಾಯಂಗೊಳಿಸುವ ಬದಲಾಗಿ ಕಡಿತಗೊಳಿಸಲು ಸರ್ಕಾರ ಮುಂದಾಗಿದೆ ಎಂದು ಅಡುಗೆ ಸಿಬ್ಬಂದಿ ದೂರಿದರು.26ರಿಂದ 70ರತನಕ ವಿದ್ಯಾರ್ಥಿ ಗಳಿಗೆ ಇಬ್ಬರು ಅಡುಗೆಯವರು ಹಾಗೂ 70ರ ಮೇಲೆ ಇದ್ದರೆ ಮೂವರನ್ನು ನಿಯೋಜಿಸಲಾಗಿದೆ. ಆದರೆ, ಈಗ ಸರ್ಕಾರ 26ರಿಂದ 100ರ ತನಕ ವಿದ್ಯಾರ್ಥಿಗಳು ಹಾಜರಿದ್ದರೆ ಇಬ್ಬರು ಅಡುಗೆಯವರು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದರಿಂದ ಸಾವಿರಾರು ಅಡುಗೆ ಸಿಬ್ಬಂದಿ ಕೆಲಸ ಕಳೆದುಕೊಳ್ಳುತ್ತಿದ್ದಾರೆ ಎಂದರು.

 


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry