ಶುಕ್ರವಾರ, ಮೇ 14, 2021
35 °C

ಅಖಂಡ ವೀಣಾ ಸಪ್ತಾಹಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಶಿವಚಿದಂಬರ ನಾಮಜಪ ಅಖಂಡ ವೀಣಾ ಸಪ್ತಾಹ ಹಾಗೂ ಚಿಕ್ಕಯ್ಯ, ದೊಡ್ಡಯ್ಯ ಧಾರ್ಮಿಕ ಕಾರ್ಯಕ್ರಮ ನಗರದ ದತ್ತಾತ್ರೇಯ ದೇವಸ್ಥಾನದಲ್ಲಿ ಭಾನುವಾರ ವಿಜೃಂಭಣೆಯಿಂದ ಆರಂಭವಾಯಿತು.ಕಾರ್ಯಕ್ರಮದ ಅಂಗವಾಗಿ ದತ್ತಾತ್ರೇಯ ದೇವಸ್ಥಾನದ ಸದ್ಭಕ್ತ ಮಂಡಳಿ ಸದಸ್ಯರು ಸುರೇಶ ಮಹಾರಾಜರನ್ನು ಪೂರ್ಣಕುಂಭ ಹಾಗೂ ವಿವಿಧ ವಾದ್ಯಮೇಳದೊಂದಿಗೆ ನಗರದಲ್ಲಿ ಮೆರವಣಿಗೆ ನಡೆಸಿದರು.ರಾಮಮಂದಿರದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಜೇಂದ್ರನಗರದ  ದತ್ತಾತ್ರೇಯ ದೇವಸ್ಥಾನಕ್ಕೆ ಬಂದು ತಲುಪಿತು. ಪುರುಷರು, ಮಹಿಳೆಯರು ಭಜನಾ ಗೀತೆಗಳನ್ನು ಹಾಡಿದರು. ಇದೇ 10ರಂದು ಬೆಳಿಗ್ಗೆ ವೀಣಾ ಸ್ಥಾಪನೆ, ನಾಮಜಪ ಪ್ರಾರಂಭ ಹಾಗೂ ಶ್ರೀಗಣ ಹೋಮ ನಡೆಯಲಿದೆ.ಜೂನ್ 11ರಿಂದ 15ರ ವರೆಗೆ ಪ್ರತಿನಿತ್ಯ ಬೆಳಿಗ್ಗೆಯಿಂದ ಸಂಜೆವರೆಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಜರುಗಲಿವೆ.ಜೂ. 16ರಂದು ಬೆಳಿಗ್ಗೆ 8 ಗಂಟೆಗೆ ಮ್ಹಾಲಸಾ ಮಾರ್ತಂಡ ದೇವರ ಮೆರವಣಿಗೆ, ಚಿಕ್ಕಯ್ಯ ದೇವರಿಗೆ ರುದ್ರಾಭಿಷೇಕ, ಭಂಡಾರ ಅರ್ಚನೆ ಕಾರ್ಯ ನಡೆಯಲಿದೆ. ಅಂದು ಸಂಜೆ ಗಂಗಾ ಪೂಜೆ, ಮಹಾ ನೈವೇದ್ಯ, ಮಹಾಮಂಗಳಾರತಿ ಹಾಗೂ ಮಹಾಪ್ರಸಾದ ಕಾರ್ಯಕ್ರಮ ನಡೆಯಲಿದೆ.ಜೂ. 17ರಂದು ದೊಡ್ಡಯ್ಯ ದೇವರ ಧಾರ್ಮಿಕ, ಅಖಂಡ ವೀಣಾ ಸಪ್ತಾಹ ಮಂಗಲೋತ್ಸವ ಹಾಗೂ ಪಾದಪೂಜೆ ಕಾರ್ಯಕ್ರಮ ನಡೆಯಲಿದೆ ಎಂದು ದತ್ತಾತ್ರೇಯ ದೇವಸ್ಥಾನದ ಸದ್ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.