ಸೋಮವಾರ, ಜನವರಿ 27, 2020
26 °C
ಕೃಷ್ಣಾ ಐತೀರ್ಪು: ಶೀಘ್ರ ಸರ್ವಪಕ್ಷ ಸಭೆ

ಅಗತ್ಯಬಿದ್ದರೆ ಸುಪ್ರೀಂ ಕೋರ್ಟ್‌ಗೆ ಮೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುವರ್ಣಸೌಧ (ಬೆಳಗಾವಿ): ವಿಧಾನ ಮಂಡಲದ ಸದನ ನಾಯಕರ ಸಭೆ ಕರೆದು ಚರ್ಚೆ ನಡೆಸಿದ ನಂತರವೇ ಕೃಷ್ಣಾ ನೀರು ಹಂಚಿಕೆಗೆ ಸಂಬಂಧ ಪಟ್ಟಂತೆ ರಾಜ್ಯ ಸರ್ಕಾರ ತನ್ನ ನಿಲು ವನ್ನು ಸ್ಪಷ್ಟಪಡಿಸಲಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೋಮವಾರ ವಿಧಾನಸಭೆಯಲ್ಲಿ ತಿಳಿಸಿದರು.ಐತೀರ್ಪು ಬಂದ ನಂತರ ರಾಜ್ಯ ಸರ್ಕಾರ ಕೇಳಿದ್ದ ಸ್ಪಷ್ಟನೆಗಳಿಗೆ ನ್ಯಾಯ ಮಂಡಳಿ ನೀಡಿರುವ ಉತ್ತರದ ಬಗ್ಗೆ  ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹೇಳಿಕೆ ನೀಡಿದ ನಂತರ ಅವರು ಮಾತನಾಡಿದರು. ‘೪೪೬ ಪುಟಗಳ ವರದಿಯನ್ನು ಸಂಪೂರ್ಣ ವಾಗಿ ಅಧ್ಯಯನ ಮಾಡಲು ಕಾಲಾವ ಕಾಶ ಬೇಕಾಗಿದೆ. ಎಲ್ಲ ಅಂಶಗಳ ಬಗ್ಗೆ ಈ ಹಂತದಲ್ಲೇ ಸ್ಪಷ್ಟವಾಗಿ ಹೇಳಲು ಆಗುವುದಿಲ್ಲ’ ಎಂದರು. ಈ ಬಗ್ಗೆ ಸದನದಲ್ಲಿ ಚರ್ಚೆ ಆಗ ಬೇಕು ಎಂದು ಸದಸ್ಯರು ಬಯಸಿದ್ದರಿಂದ ಮಂಗಳ ವಾರ ಚರ್ಚೆಗೆ ಅವಕಾಶ ನೀಡಲಾಗು ವುದು ಎಂದು ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ  ಹೇಳಿದರು.ನ್ಯಾಯಮಂಡಳಿ ತೀರ್ಪನ್ನು ಕಾನೂನು ಹಾಗೂ ತಾಂತ್ರಿಕ ತಂಡ ಗಳು ಪರಿಶೀಲಿಸುತ್ತಿವೆ. ಆದೇಶ ಪರಿಷ್ಕ ರಿಸುವಂತೆ ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗ ಬೇಕಾಗಬಹುದು ಎಂದು ಸಚಿವ ಪಾಟೀಲ ಹೇಳಿದರು. ಐತೀರ್ಪಿನಿಂದ ರಾಜ್ಯಕ್ಕೆ ಅನುಕೂಲ ವಾಗಿದೆ ಎಂಬ ಭ್ರಮೆ ಇಲ್ಲ. ಕಾನೂನು ರೀತಿ ಅಧ್ಯಯನ ಮಾಡಿದ ನಂತರವೇ ಸ್ಪಷ್ಟವಾದ ತೀರ್ಮಾನ ತೆಗೆದುಕೊಳ್ಳ ಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ಹಂಚಿಕೆಯಾದ ನಂತರ ಉಳಿಯುವ ನೀರಿನ ಮೇಲೆ ಈ ಮುಂಚೆ ರಾಜ್ಯಕ್ಕೆ ಅಧಿಕಾರ ಇರಲಿಲ್ಲ. ಆದರೆ, ಈಗ ಉಳಿಕೆ ನೀರು ರಾಜ್ಯಕ್ಕೆ ದೊರೆಯಲಿದೆ ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು. ಐತೀರ್ಪಿನಿಂದ ರಾಜ್ಯಕ್ಕೆ ಅನು ಕೂಲವಾಗಿದೆ ಎಂದು ಕೆಲವರು ಹೇಳು ತ್ತಾರೆ, ಅನುಕೂಲಕ್ಕಿಂತ ಅನಾನು ಕೂಲವೇ ಜಾಸ್ತಿ ಎಂದು ಇನ್ನೂ ಕೆಲವರು ಹೇಳುತ್ತಾರೆ. ಆದ್ದರಿಂದ ಈ ಬಗ್ಗೆ ಚರ್ಚೆಯಾಗಬೇಕು ಎಂದು ವಿರೋಧ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದರು.ಆಲಮಟ್ಟಿ ಜಲಾಶಯದ ಮಟ್ಟವನ್ನು ೫೨೪.೨೫೬ ಮೀಟರ್ ಎತ್ತರಕ್ಕೆ ಏರಿ ಸುವುದನ್ನು ಪುನರುಚ್ಚರಿಸಿರು ವುದು ಬಿಟ್ಟರೆ ಉಳಿ ದಂತೆ ಯಾವುದೇ ಅನುಕೂಲ ಆಗಿಲ್ಲ. ಆದ್ದರಿಂದ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸು ವುದು ಸೂಕ್ತ ಎಂದು ಕೆಜೆಪಿಯ ಬಿ.ಎಸ್. ಯಡಿಯೂರಪ್ಪ ಸಲಹೆ ಮಾಡಿದರು. ಸುಪ್ರೀಂ ಕೋರ್ಟ್ ಮೊರೆ ಹೋಗಲು ಆಂಧ್ರಪ್ರದೇಶ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. ರಾಜ್ಯ ಸರ್ಕಾರ ಈ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿ ಬೇಗ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಬಿಜೆಪಿಯ ಬಸವರಾಜ ಬೊಮ್ಮಾಯಿ ಸಲಹೆ ಮಾಡಿದರು.

ಪ್ರತಿಕ್ರಿಯಿಸಿ (+)