ಅಗೌರವ ತರುವಂತೆ ಮಾತನಾಡಿಲ್ಲ

7

ಅಗೌರವ ತರುವಂತೆ ಮಾತನಾಡಿಲ್ಲ

Published:
Updated:

ಬೆಂಗಳೂರು: ಉಪ ಲೋಕಾಯುಕ್ತರ ನೇಮಕಾತಿಗೆ ಸಂಬಂಧಿಸಿದಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರಿಗೆ ಅಗೌರವ ಉಂಟುಮಾಡುವ ರೀತಿಯಲ್ಲಿ ತಾವು ಯಾವುದೇ ಹೇಳಿಕೆ ನೀಡಿಲ್ಲ ಎಂದು ಕಾನೂನು ಸಚಿವ ಎಸ್.ಸುರೇಶ್‌ಕುಮಾರ್ ತಿಳಿಸಿದ್ದಾರೆ.`ಎರಡನೇ ಉಪ ಲೋಕಾಯುಕ್ತರ ನೇಮಕಾತಿಗೆ ಸಂಬಂಧಿಸಿದಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರು ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಬಗ್ಗೆ ಗಂಭೀರ ಚರ್ಚೆ ನಡೆಸುತ್ತದೆ ಎಂದು ಹೇಳಿದ್ದೆ. ಉಪ ಲೋಕಾಯುಕ್ತರ ನೇಮಕಾತಿಯು ಕಾನೂನು ಪ್ರಕಾರ ಹಾಗೂ ಪರಂಪರೆಯಂತೆ ನಡೆದಿದೆ ಎಂಬುದನ್ನೂ ಆಗ ತಿಳಿಸಿದ್ದೆ.ಬೇರೆ ಯಾವುದೇ ಹೇಳಿಕೆಯನ್ನೂ ನೀಡಿರಲಿಲ್ಲ~ ಎಂದು ಹೇಳಿಕೆಯಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry