ಅಗ್ನಿಶಾಮದ ದಳದ ಸಿಬ್ಬಂದಿಗೆ ಗುಂಡೇಟು

7

ಅಗ್ನಿಶಾಮದ ದಳದ ಸಿಬ್ಬಂದಿಗೆ ಗುಂಡೇಟು

Published:
Updated:

ನ್ಯೂಯಾರ್ಕ್ (ಪಿಟಿಐ): ಇಲ್ಲಿನ ವೆಬ್‌ಸ್ಟರ್‌ನಲ್ಲಿ ಹೊತ್ತಿ ಉರಿಯುತ್ತಿದ್ದ ಮನೆಯೊಂದರ ಬೆಂಕಿ ನಂದಿಸುತ್ತಿದ್ದ ಅಗ್ನಿಶಾಮಕ ದಳದ ಸಿಬ್ಬಂದಿಯತ್ತ ಅಪರಿಚಿತ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದು ಕನಿಷ್ಠ ಇಬ್ಬರು ಗಾಯಗೊಂಡಿದ್ದಾರೆ.ಗುಂಡೇಟಿನಿಂದ ಬೆನ್ನಿನಲ್ಲಿ ಗಾಯವಾಗಿರುವ ಅಗ್ನಿಶಾಮಕ ದಳದ ಒಬ್ಬ ಸಿಬ್ಬಂದಿಗೆ ಚಿಕಿತ್ಸೆ ನೀಡಲಾಗಿದೆ. ಮತ್ತೊಬ್ಬ ಸಿಬ್ಬಂದಿಗೂ ಚಿಕಿತ್ಸೆ ನೀಡಿದ್ದು ಇವರು ಗುಂಡೇಟಿನಿಂದ ಗಾಯಗೊಂಡರೋ ಅಥವಾ ಅಗ್ನಿ ಆಕಸ್ಮಿಕದಲ್ಲಿ ಗಾಯಗೊಂಡಿದ್ದರೋ ತಿಳಿದಿಲ್ಲ ಎಂದು ಆಸ್ಪತ್ರೆ ಮೂಲಗಳು ಹೇಳಿವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry