ಗುರುವಾರ , ನವೆಂಬರ್ 14, 2019
18 °C

ಅಗ್ನಿ-2 ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

Published:
Updated:
ಅಗ್ನಿ-2 ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಬಾಲಸೋರ್ (ಒಡಿಶಾ) (ಪಿಟಿಐ): ಪರಮಾಣು ಸಿಡಿ ತಲೆಗಳನ್ನು ಹೊತ್ತು ಸುಮಾರು 2000 ಕಿ.ಮೀ ದೂರದ ಗುರಿಯನ್ನು ಕರಾರುವಕ್ಕಾಗಿ ತಲುಪಬಲ್ಲ ಸ್ವದೇಶಿ ನಿರ್ಮಿತ ಅಗ್ನಿ -2 ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಭಾನುವಾರ ಇಲ್ಲಿನ ಕರಾವಳಿ ತೀರದಲ್ಲಿ ಯಶಸ್ವಿಯಾಗಿ ನಡೆಯಿತು.ಬೆಳಗ್ಗೆ 10.30ರ ಸುಮಾರಿಗೆ ಸಮಗ್ರ ಪರೀಕ್ಷಾ ವಲಯದ (ಐಟಿಆರ್) ಉಡಾವಣೆ ಸಂಕೀರ್ಣ 4ರಲ್ಲಿ ಸಂಚಾರಿ ಉಡಾವಣ ವಾಹಕದಿಂದ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಲಾಯಿತು ಎಂದು ರಕ್ಷಣಾ ಮೂಲಗಳು ತಿಳಿಸಿವೆ.20 ಮೀಟರ್ ಉದ್ದ ಹಾಗೂ 17 ಟನ್ ತೂಕ ಇರುವ ಒಂದು ಸಾವಿರ ಕೆ.ಜಿ ತೂಕದ ಸಿಡಿತಲೆಗಳನ್ನು ಹೊತ್ತು 2000 ಕಿ.ಮೀ ದೂರದ ಗುರಿಯನ್ನು ನಿಖರವಾಗಿ ತಲುಪಬಲ್ಲದು ಎಂದು ಡಿಆರ್‌ಡಿಓ ವಿಜ್ಞಾನಿಗಳು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)