ಅಗ್ನಿ-5 ಕ್ಷಿಪಣಿ ಪರೀಕ್ಷೆಗೆ ಸಿದ್ಧತೆ

7

ಅಗ್ನಿ-5 ಕ್ಷಿಪಣಿ ಪರೀಕ್ಷೆಗೆ ಸಿದ್ಧತೆ

Published:
Updated:
ಅಗ್ನಿ-5 ಕ್ಷಿಪಣಿ ಪರೀಕ್ಷೆಗೆ ಸಿದ್ಧತೆ

ನವದೆಹಲಿ (ಪಿಟಿಐ): ಐದು ಸಾವಿರ ಕಿ.ಮೀ ದೂರದವರೆಗೆ ಪರಮಾಣು ಅಸ್ತ್ರ ಹೊತ್ತೊಯ್ಯಬಲ್ಲ ಸಾಮರ್ಥ್ಯದ ಅಗ್ನಿ-5 ಕ್ಷಿಪಣಿಯನ್ನು ಸದ್ಯದಲ್ಲೇ ಪರೀಕ್ಷೆ ನಡೆಸಲಾಗುವುದು ಎಂದು ರಕ್ಷಣಾ ಇಲಾಖೆಯ ಅಭಿವೃದ್ಧಿ ಮತ್ತು ಸಂಶೋಧನಾ ವಿಭಾಗ ತಿಳಿಸಿದೆ.ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿಭಾಗದ ಮುಖ್ಯಸ್ಥ ಕೆ.ಸಾರಸ್ವತ್ ಅವರು, `ಅಗ್ನಿ-4ರ ಯಶಸ್ವಿ ಪ್ರಯೋಗವು ನಮಗೆ ಈ ದಿಸೆಯಲ್ಲಿ ಇನ್ನಷ್ಟು ಉತ್ತೇಜನ ನೀಡಿದೆ. ಆದ್ದರಿಂದ ನೂತನ ಕ್ಷಿಪಣಿಯನ್ನು ಮುಂದಿನ ವರ್ಷದ ಫೆಬ್ರುವರಿ ತಿಂಗಳಿನಲ್ಲಿ ಪರೀಕ್ಷಾರ್ಥ ಪ್ರಯೋಗ ನಡೆಸಲಾಗುವುದು~ ಎಂದರು.ಮಂಗಳವಾರ ನಡೆಸಲಾದ ಅಗ್ನಿ-4ರ ಯಶಸ್ವಿ ಪ್ರಯೋಗವು ಭಾರತದ ರಕ್ಷಣಾ ಇಲಾಖೆಯ ಸ್ವಯಾರ್ಜಿತ ರಕ್ಷಣಾ ತಂತ್ರಜ್ಞಾನದ ಅಭಿವೃದ್ಧಿಗೆ ಸಾಕ್ಷಿಯಾಗಿದೆ ಎಂದು ಅವರು ಬಣ್ಣಿಸಿದರು.ಈ ಹಿಂದಿನ ಅಗ್ನಿ-1 ಮತ್ತು ಅಗ್ನಿ-2ರ ನಿಖರತೆಗಿಂತಲೂ ಅಗ್ನಿ-4 ಹೆಚ್ಚು ಅತ್ಯಾಧುನಿಕವಾಗಿ ನಿರ್ಮಾಣಗೊಂಡಿದೆ. ಇದರಿಂದ ದೇಶದ ರಕ್ಷಣಾ ವ್ಯವಸ್ಥೆ ನಿಸ್ಸಂಶಯವಾಗಿ ಹೆಚ್ಚಿನ ಬಲ ಹೊಂದಲಿದೆ ಎಂದು ಸಾರಸ್ವತ್ ವಿವರಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry