ಶನಿವಾರ, ಮೇ 8, 2021
26 °C

ಅಗ್ನಿ-5 ಕ್ಷಿಪಣಿ 8,000 ಕಿ.ಮೀ ದೂರ ಕ್ರಮಿಸಬಲ್ಲದು - ಚೀನಾ ವಿಜ್ಞಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜ್ಜಿಂಗ್ , (ಐಎಎನ್ಎಸ್): ಭಾರತವು ಗುರುವಾರ ಯಶಸ್ವಿ ಪರೀಕ್ಷಾರ್ಥ ಉಡಾವಣೆ ಮಾಡಿದ ~ಅಗ್ನಿ-5 ಖಂಡಾಂತರ ಕ್ಷಿಪಣಿ~ಯು ವಾಸ್ತವವಾಗಿ 8,000ಕಿಮೀ ದೂರದ ಗುರಿಯನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ~ ಎಂದು ಚೀನಿ ಸಂಶೋಧಕರೊಬ್ಬರು ಶುಕ್ರವಾರ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಭಾರತವು ತನ್ನ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಸುಮಾರು 5,000ಕಿಮೀ ದೂರವನ್ನು ಕ್ರಮಿಸಬಲ್ಲ ಅಗ್ನಿ-5 ಖಂಡಾಂತರ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಉಡಾವಣೆಯನ್ನು ನಡೆಸಿದೆ ಎಂದು ಹೇಳಿಕೊಂಡಿದೆ.

ಆದರೆ, ವಾಸ್ತವವಾಗಿ ಆ ಕ್ಷಿಪಣಿಯು 8,000ಕಿಮೀ ದೂರದ ಗುರಿ ಸಾಧಿಸುವ ಸಾಮರ್ಥ್ಯ ಹೊಂದಿದೆ ಎಂದು ಚೀನಾದ ಪಿಎಲ್ಎ ಮಿಲಿಟರಿ ವಿಜ್ಞಾನ ಅಕಾಡೆಮಿಯ ಸಂಶೋಧಕ ಡೂ ವಿನ್ಲಾಂಗ್ ಅವರು ಗ್ಲೋಬಲ್ ಟೈಮ್ಸ್ ಗೆ ತಿಳಿಸಿದ್ದಾರೆ.

ಇವರೊಂದಿಗೆ ಪೀಪಲ್ಸ್ ಲಿಬರೇಷನ್ ಆರ್ಮಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೂ ಸಹ  ಅಗ್ನಿ-5 ಕ್ಷಿಪಣೆಯ ಸಾಮರ್ಥ್ಯ 8,000 ದೂರದ ಸಾಮರ್ಥ್ಯ ಹೊಂದಿದೆ ಎಂದಿದ್ದಾರೆ.

~ಇತರೆ ದೇಶಗಳ ಟೀಕೆಗಳಿಂದ ದೂರವಿರುವ ಉದ್ದೇಶದಿಂದ ಭಾರತ ಸರ್ಕಾರವು ಉದ್ದೇಶಪೂರ್ವಕವಾಗಿ ಅಗ್ನಿ-5 ಕ್ಷಿಪಣಿಯ ನಿಜವಾದ ಸಾಮರ್ಥ್ಯವನ್ನು ಮರೆಮಾಚಿದೆ ಎಂದು ಸಂಶೋಧಕರು ಆರೋಪಿಸಿದ್ದಾರೆ.ಭಾರತವು ಗುರುವಾರ ಮೊದಲ ಬಾರಿ ಸುಮಾರು ಒಂದೂವರೆ ಟನ್ ತೂಕದ ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಅಗ್ನಿ-5 ಖಂಡಾಂತರ ಕ್ಷಿಪಣಿಯ ಯಶಸ್ವಿಯ ಪರೀಕ್ಷಾರ್ಥವನ್ನು ನಡೆಸುವುದರೊಂದಿಗೆ ಪ್ರತಿಷ್ಠಿತ ಕ್ಷಿಪಣೆ ಹೊಂದಿರುವ ರಾಷ್ಟ್ರಗಳ ಸಾಲಿಗೆ ಸೇರಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.