ಅಗ್ರಸ್ಥಾನಕ್ಕೇರಿದ ಸೇತುರಾಮನ್‌

7

ಅಗ್ರಸ್ಥಾನಕ್ಕೇರಿದ ಸೇತುರಾಮನ್‌

Published:
Updated:

ಕೊಜಾಯೆಲಿ, ಟರ್ಕಿ (ಪಿಟಿಐ): ಭಾರತದ ಗ್ರ್ಯಾಂಡ್‌­ಮಾಸ್ಟರ್‌ ಎಸ್‌.ಪಿ.ಸೇತುರಾಮನ್‌ ಇಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್‌ ಚೆಸ್‌ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.ಐದನೇ ಸುತ್ತಿನ ಪಂದ್ಯದಲ್ಲಿ ಸೇತುರಾಮನ್‌ ಅಚ್ಚರಿ ಪ್ರದರ್ಶನದ ಮೂಲಕ ಗಮನ ಸೆಳೆದರು. ಅವರು ಆಘಾತ ನೀಡಿದ್ದು ರಷ್ಯಾದ ಆಂಡ್ರಿ ಸ್ಟುಕೊಪಿನ್‌ಗೆ. ಈ ಮೂಲಕ ಅವರು ಪೂರ್ಣ ಪಾಯಿಂಟ್‌ ಸಂಪಾದಿಸಿದರು. ಸೇತು­ರಾ­ಮನ್‌ ಬಳಿ ಈಗ ಒಟ್ಟು 4.5 ಪಾಯಿಂಟ್‌ಗಳಿವೆ. ಚೀನಾದ ಯು ಯಾಂಗಿ ಕೂಡ ಇಷ್ಟೇ ಪಾಯಿಂಟ್‌ ಹೊಂದಿದ್ದಾರೆ.ಕಪ್ಪು ಕಾಯಿಗಳಿಂದ ಆಡಿದರೂ ಎದುರಾಳಿಯನ್ನು ಬೆಚ್ಚಿ ಬೀಳಿಸುವಲ್ಲಿ ಭಾರತದ ಆಟಗಾರ ಯಶಸ್ವಿಯಾದರು. ಸೇತುರಾಮನ್‌ ಈ ಪಂದ್ಯದಲ್ಲಿ ಸಿಸಿಲಿಯನ್‌ ನಜ್‌ಡಾರ್ಫ್‌ ಮಾದರಿ ಆಟಕ್ಕೆ ಮುಂದಾದರು.ಗೆಲುವಿನ ಹಾದಿಗೆ ಮರಳಿರುವ ಗ್ರ್ಯಾಂಡ್‌ಮಾಸ್ಟರ್‌ ಸಹಜ್‌ ಗ್ರೋವರ್‌ ಐದನೇ ಸುತ್ತಿನ ಪಂದ್ಯದಲ್ಲಿ ಇಂಡೊನೇಷ್ಯಾದ ಮುಹಮ್ಮದ್‌ ಲುತ್ಫಿ ಅಲಿ ಎದುರು ಜಯ ಗಳಿಸಿದರು. ನಾಲ್ಕು ಪಾಯಿಂಟ್‌ ಹೊಂದಿರುವ ಅವರು ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ. ಗ್ರೋವರ್‌ ಕೂಡ ಸಿಸಿಲಿಯನ್‌ ನಜ್‌ಡಾರ್ಫ್‌ ಮಾದರಿ ಆಟಕ್ಕೆ ಮುಂದಾದರು.ದೆಬಾಶಿಸ್‌ ದಾಸ್‌ ಕೊಲಂಬಿಯಾದ ಮಾರ್ಟಿನ್‌ ರೊಮೆರೊ ಮಾರ್ಟಿನೆಜ್‌ ಎದುರು ಗೆದ್ದು ಪೂರ್ಣ ಪಾಯಿಂಟ್‌ ಗಳಿಸಿದರು. ಆದರೆ ವಿದಿತ್‌ ಗುಜರಾತಿ ಪೋಲೆಂಡ್‌ನ ದುಡಾ ಜಾನ್‌ ಕ್ರಿಸ್‌ಟಾಫ್‌ ಎದುರು ಡ್ರಾ ಮಾಡಿಕೊಂಡರು.ಏಷ್ಯನ್‌ ಜೂನಿಯರ್‌ ಚಾಂಪಿಯನ್‌ ಎನ್‌.ಶ್ರೀನಾಥ್‌ ಟರ್ಕಿಯ ಅಲಿ ಮರಾಂದಿ ಸೆಮಿಲ್‌ ಕ್ಯಾನ್‌ ಎದುರು ಗೆದ್ದರು. ಈ ಟೂರ್ನಿಯಲ್ಲಿ ಇನ್ನೂ 8 ಸುತ್ತುಗಳ ಆಟ ಬಾಕಿ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry