ಅಗ್ರಸ್ಥಾನದಲ್ಲಿ ಆನಂದ್

7

ಅಗ್ರಸ್ಥಾನದಲ್ಲಿ ಆನಂದ್

Published:
Updated:

ವಿಕ್ ಆನ್ ಜೀ, ಹಾಲೆಂಡ್ (ಪಿಟಿಐ): ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ ಟಾಟಾ ಸ್ಟೀಲ್ ಚೆಸ್ ಟೂರ್ನಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಭಾರತದ ಗ್ರ್ಯಾಂಡ್‌ಮಾಸ್ಟರ್ ‘ಎ’ ಗುಂಪಿನ ಐದನೇ ಸುತ್ತಿನ ಪಂದ್ಯದಲ್ಲಿ ಹಾಲೆಂಡ್‌ನ ಜಾನ್ ಸ್ಮೀರ್ಟ್ಸ್ ಅವರನ್ನು ಮಣಿಸಿದರು. ಈ ಮೂಲಕ ಅವರು ಒಟ್ಟು   ನಾಲ್ಕು ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನಕ್ಕೇರಿದರು.

ಆನಂದ್ ಐದು ಪಂದ್ಯಗಳಲ್ಲಿ ಮೂರು ಗೆಲುವು ಹಾಗೂ ಎರಡು ಡ್ರಾ ಸಾಧಿಸಿದ್ದಾರೆ. ಅಮೆರಿಕದ ಹಿಕಾರು ನಕಮುರ ಅವರು 3.5 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ನಕಮುರ ಐದನೇ ಸುತ್ತಿನ ಪಂದ್ಯದಲ್ಲಿ ಉಕ್ರೇನ್‌ನ ರುಸ್ಲಾನ್ ಪೊನೊಮರಿಯೊವ್ ವಿರುದ್ಧ ಡ್ರಾ ಸಾಧಿಸಿದರು.

14 ಆಟಗಾರರು ಪಾಲ್ಗೊಂಡಿರುವ ಟೂರ್ನಿಯಲ್ಲಿ ಇನ್ನು ಎಂಟು ಸುತ್ತುಗಳ ಪಂದ್ಯಗಳು ಬಾಕಿಯುಳಿದಿವೆ. ಹಾಲೆಂಡ್‌ನ ಅನೀಶ್ ಗಿರಿ ಮತ್ತು ಫ್ರಾನ್ಸ್‌ನ ಮ್ಯಾಕ್ಸಿಮ್ ಲಾಗ್ರೇವ್ ಅವರು ತಲಾ ಮೂರು ಪಾಯಿಂಟ್‌ಗಳೊಂದಿಗೆ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry