ಬುಧವಾರ, ಮಾರ್ಚ್ 3, 2021
31 °C
ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌: ಗೌತಮ್‌ ಮಿಂಚು

ಅಗ್ರಸ್ಥಾನದಲ್ಲಿ ಕೆಎಸ್‌ಸಿಎ ಇಲೆವೆನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಗ್ರಸ್ಥಾನದಲ್ಲಿ ಕೆಎಸ್‌ಸಿಎ ಇಲೆವೆನ್‌

ಬೆಂಗಳೂರು: ಹಿಮಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್‌ಗಳ ಗೆಲುವು ಸಾಧಿಸಿದ  ಕೆಎಸ್‌ಸಿಎ ಇಲೆವೆನ್ ತಂಡ ತಿಮ್ಮಪ್ಪಯ್ಯ ಸ್ಮಾರಕ ಆಹ್ವಾನಿತ ಕ್ರಿಕೆಟ್‌ ಟೂರ್ನಿಯ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದೆ.ಆದಿತ್ಯ ಗ್ಲೋಬಲ್ ಮೈದಾನದಲ್ಲಿ ಶನಿವಾರ ಮುಗಿದ ಪಂದ್ಯದಲ್ಲಿ ಮಯಂಕ್‌ ಅಗರವಾಲ್‌ (47), ಸಿ.ಎಂ. ಗೌತಮ್‌ (ಔಟಾಗದೆ 83) ವೇಗವಾಗಿ ರನ್ ಗಳಿಸಿ ಗೆಲುವು ತಂದುಕೊಟ್ಟರು. ಗುಂಪಿನಲ್ಲಿ ಒಡಿಶಾ, ತ್ರಿಪುರಾ ಮತ್ತು ಹಿಮಾಚಲ ತಂಡಗಳು ಕ್ರಮವಾಗಿ ನಂತರದ ಸ್ಥಾನಗಳನ್ನು ಹೊಂದಿವೆ.

‘ಬಿ’ ಗುಂಪಿನಲ್ಲಿ ಮುಂಬೈ, ‘ಸಿ’ ಗುಂಪಿನಲ್ಲಿ ಬಂಗಾಳ ಮತ್ತು ‘ಡಿ’ ಗುಂಪಿನಲ್ಲಿ ವಿದರ್ಭ ತಂಡಗಳು ಮೊದಲ ಸ್ಥಾನಗಳಲ್ಲಿವೆ.ಸಂಕ್ಷಿಪ್ತ ಸ್ಕೋರು: ಹಿಮಾಚಲ ಪ್ರದೇಶ 337 ಹಾಗೂ ಎರಡನೇ ಇನಿಂಗ್ಸ್ 51.4 ಓವರ್‌ಗಳಲ್ಲಿ 223. ಕೆಎಸ್‌ಸಿಎ ಇಲೆವೆನ್‌ 342 ಮತ್ತು ದ್ವಿತೀಯ ಇನಿಂಗ್ಸ್‌ 65 ಓವರ್‌ಗಳಲ್ಲಿ 5 ವಿಕೆಟ್‌ಗೆ 219 (ಆರ್. ಸಮರ್ಥ್‌ 34, ಮಯಂಕ್ ಅಗರವಾಲ್‌ 47, ಸಿ.ಎಂ. ಗೌತಮ್ ಔಟಾಗದೆ 83, ಅಬ್ರಾರ್‌ ಖಾಜಿ ಔಟಾಗದೆ 22; ಗುರ್ವಿಂದರ್ ಸಿಂಗ್‌ 65ಕ್ಕೆ2, ಮಯಂಕ್ ದಾಗರ್‌ 55ಕ್ಕೆ3). ಫಲಿ ತಾಂಶ: ಕೆಎಸ್‌ಸಿಎ ಇಲೆವೆನ್ ತಂಡಕ್ಕೆ 5 ವಿಕೆಟ್‌ ಜಯ ಹಾಗೂ 6 ಪಾಯಿಂಟ್ಸ್‌.ಗ್ರೀನ್‌ ಸ್ಪೋರ್ಟ್ಸ್‌ ಮೈದಾನ: ಒಡಿಶಾ ಮೊದಲ ಇನಿಂಗ್ಸ್‌ 540. ತ್ರಿಪುರ 343 ಮತ್ತು ದ್ವಿತೀಯ ಇನಿಂಗ್ಸ್‌ 57  ಓವರ್‌ಗಳಲ್ಲಿ 7 ವಿಕೆಟ್‌ಗೆ 143. ಫಲಿತಾಂಶ: ಡ್ರಾ. ಒಡಿಶಾಕ್ಕೆ ಮೂರು ಪಾಯಿಂಟ್ಸ್‌.ಆರ್‌ಎಸ್‌ಐ ಮೈದಾನ: ಬರೋಡ 364 ಮತ್ತು ಎರಡನೇ ಇನಿಂಗ್ಸ್‌್ 66.1 ಓವರ್‌ಗಳಲ್ಲಿ 9 ವಿಕೆಟ್‌ಗೆ 263 ಡಿಕ್ಲೇರ್ಡ್‌. ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್‌ 219 ಹಾಗೂ ದ್ವಿತೀಯ ಇನಿಂಗ್ಸ್‌ 72.1 ಓವರ್‌ಗಳಲ್ಲಿ 323. ಫಲಿತಾಂಶ: ಬರೋಡ ತಂಡಕ್ಕೆ 85 ರನ್ ಜಯ ಹಾಗೂ 6 ಪಾಯಿಂಟ್ಸ್‌.ಜಸ್ಟ್‌ ಕ್ರಿಕೆಟರ್ಸ್‌ ಮೈದಾನ: ಡಿ.ವೈ. ಪಾಟೀಲ್‌ ಅಕಾಡೆಮಿ 336 ಹಾಗೂ ಎರಡನೇ ಇನಿಂಗ್ಸ್‌ 62.3 ಓವರ್‌ಗಳಲ್ಲಿ 192. ಕೆಎಸ್‌ಸಿಎ ಕೋಲ್ಟ್ಸ್‌  ಪ್ರಥಮ ಇನಿಂಗ್ಸ್‌ 324 ಮತ್ತು 65.4 ಓವರ್‌ಗಳಲ್ಲಿ 6 ವಿಕೆಟ್‌ಗೆ 206. ಫಲಿತಾಂಶ: ಕೆಎಸ್‌ಸಿಎ ಕೋಲ್ಟ್ಸ್‌  ತಂಡಕ್ಕೆ 4  ವಿಕೆಟ್ ಜಯ ಹಾಗೂ 6 ಪಾಯಿಂಟ್ಸ್‌.ಆಲೂರು ಒಂದನೇ ಮೈದಾನ: ಬಂಗಾಳ 402 ಮತ್ತು ಎರಡನೇ ಇನಿಂಗ್ಸ್‌ 34.3 ಓವರ್‌ಗಳಲ್ಲಿ 7 ವಿಕೆಟ್‌ಗೆ 225 ಡಿಕ್ಲೇರ್ಡ್‌. ಕೇರಳ ಮೊದಲ ಇನಿಂಗ್ಸ್‌ 266 ಹಾಗೂ 56.1 ಓವರ್‌ಗಳಲ್ಲಿ 128. ಫಲಿತಾಂಶ: ಬಂಗಾಳ ತಂಡಕ್ಕೆ 233 ರನ್ ಜಯ ಹಾಗೂ ಆರು ಪಾಯಿಂಟ್ಸ್‌.ಬಿಜಿಎಸ್‌ ಮೈದಾನ: ಹರಿಯಾಣ 341 ಹಾಗೂ ದ್ವಿತೀಯ ಇನಿಂಗ್ಸ್‌ 187. ವಿದರ್ಭ ಮೊದಲ ಇನಿಂಗ್ಸ್‌ 272 ಮತ್ತು 81.1 ಓವರ್‌ಗಳಲ್ಲಿ 7 ವಿಕೆಟ್‌ಗೆ 296. ಫಲಿತಾಂಶ: ವಿದರ್ಭ ತಂಡಕ್ಕೆ 3 ವಿಕೆಟ್‌ ಜಯ ಹಾಗೂ ಆರು ಪಾಯಿಂಟ್ಸ್‌.ಮೈಸೂರಿನಲ್ಲಿ ನಡೆದ ಪಂದ್ಯಗಳು

ಜೆಸಿಇ ಮೈದಾನ:
ಪಂಜಾಬ್‌ 246 ಮತ್ತು ದ್ವಿತೀಯ ಇನಿಂಗ್ಸ್‌ 106.5 ಓವರ್‌ಗಳಲ್ಲಿ 364. ಮುಂಬೈ ಮೊದಲ ಇನಿಂಗ್ಸ್‌  184 ಹಾಗೂ 98 ಓವರ್‌ಗಳಲ್ಲಿ 5 ವಿಕೆಟ್‌ಗೆ 271. ಫಲಿತಾಂಶ: ಡ್ರಾ. ಪಂಜಾಬ್‌ ತಂಡಕ್ಕೆ ಮೂರು ಪಾಯಿಂಟ್ಸ್‌.ಎಸ್‌ಡಿಎನ್‌ಆರ್‌ಡಬ್ಲ್ಯು ಮೈದಾನ: ಗುಜರಾತ್‌ ಮೊದಲ ಇನಿಂಗ್ಸ್‌ 600. ಆಂಧ್ರ ಪ್ರಥಮ ಇನಿಂಗ್ಸ್‌ 161 ಓವರ್‌ಗಳಲ್ಲಿ 535. ಫಲಿತಾಂಶ: ಡ್ರಾ. ಗುಜರಾತ್ ತಂಡಕ್ಕೆ ಮೂರು ಪಾಯಿಂಟ್ಸ್‌.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.