ಶುಕ್ರವಾರ, ಜೂನ್ 25, 2021
21 °C

ಅಗ್ರಸ್ಥಾನದಲ್ಲಿ ಬಾಂಗ್ಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಗಾಂಗ್‌ (ಪಿಟಿಐ): ಐಸಿಸಿ ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್ ಟೂರ್ನಿಯ ಪ್ರಧಾನ ಹಂತದಲ್ಲಿ ಆಡಬೇಕೆನ್ನುವ ಆತಿಥೇಯ ಬಾಂಗ್ಲಾದೇಶ ತಂಡದ ಕನಸು ನನಸಾಗುವ ಹಾದಿ ಸನಿಹ ವಾಗುತ್ತಿದೆ. ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆದಿರುವ ಬಾಂಗ್ಲಾ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.ಮೊದಲ ಪಂದ್ಯದಲ್ಲಿ ಆಫ್ಘಾನಿಸ್ತಾನ ವಿರುದ್ಧ ಗೆಲುವು ಸಾಧಿಸಿದ್ದ ಆತಿಥೇಯ ತಂಡ  ಮಂಗಳವಾರ ನಡೆದ ಎರಡನೇ ಅರ್ಹತಾ ಪಂದ್ಯದಲ್ಲಿ ನೇಪಾಳದ ವಿರುದ್ಧ ಎಂಟು ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿತು. ಈ ತಂಡ ಒಟ್ಟು ನಾಲ್ಕು ಪಾಯಿಂಟ್‌ ಹೊಂದಿದೆ.ಟಾಸ್‌ ಗೆದ್ದ ಬಾಂಗ್ಲಾ ಎದುರಾಳಿ ತಂಡಕ್ಕೆ ಮೊದಲು ಬ್ಯಾಟ್‌ ಮಾಡಲು ಅವಕಾಶ ನೀಡಿ 126 ರನ್‌ಗೆ ಕಟ್ಟಿ ಹಾಕಿತು. ಈ ಗುರಿಯನ್ನು   ಬಾಂಗ್ಲಾ 15.3 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು ತಲುಪಿತು.33 ಎಸೆತಗಳಲ್ಲಿ 5 ಬೌಂಡರಿ ಮತ್ತು  ಎರಡು ಸಿಕ್ಸರ್‌ ಸೇರಿದಂತೆ 42 ರನ್‌ ಕಲೆ ಹಾಕಿದ ಅನಾಮುಲ್‌ ಹಕ್‌ ಈ ಗೆಲು ವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.ಸಂಕ್ಷಿಪ್ತ ಸ್ಕೋರು: ನೇಪಾಳ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 126 (ಸಾಗರ್ ಪನ್‌ 12, ಜ್ಞಾನೇಂದ್ರ ಮಲ್ಲಾ 13, ಪರಸ್‌ ಖಾಡ್ಕಾ 41, ವಿ. ಶರದ್‌ 40; ಅಲ್‌ ಅಮಿನ್‌ ಹೊಸೈನ್‌ 17ಕ್ಕೆ2); ಬಾಂಗ್ಲಾದೇಶ 15.3 ಓವರ್‌ ಗಳಲ್ಲಿ 2 ವಿಕೆಟ್‌ಗೆ 132 (ತಮೀಮ್‌ ಇಕ್ಬಾಲ್‌ 30, ಅನಾಮುಲ್‌ ಹಕ್‌ 42, ಶಬ್ಬೀರ್‌ ರೆಹಮಾನ್‌ ಔಟಾಗದೆ 21, ಶಕೀಬ್‌ ಅಲ್‌ ಹಸನ್‌ ಔಟಾಗದೆ 37; ಬಸಂತ್‌ ರೆಗ್ಮಿ 14ಕ್ಕೆ1). ಫಲಿತಾಂಶ: ಬಾಂಗ್ಲಾದೇಶಕ್ಕೆ 8 ವಿಕೆಟ್‌ ಗೆಲುವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.