ಅಗ್ರಸ್ಥಾನದಲ್ಲಿ ಮಹಮ್ಮಡನ್

7

ಅಗ್ರಸ್ಥಾನದಲ್ಲಿ ಮಹಮ್ಮಡನ್

Published:
Updated:

ಬೆಂಗಳೂರು: ಐದು ಪಂದ್ಯಗಳಿಂದ ಹತ್ತು ಅಂಕಗಳನ್ನು ಕಲೆ ಹಾಕಿರುವ ಮಹಮ್ಮಡನ್ ಸ್ಪೋರ್ಟಿಂಗ್ ತಂಡ ಐ ಲೀಗ್ ಫುಟ್‌ಬಾಲ್ ಟೂರ್ನಿಯ ಎರಡನೇ ಡಿವಿಷನ್‌ನ ಮೊದಲ ಲೆಗ್‌ನಲ್ಲಿ ಅಗ್ರಸ್ಥಾನ ಪಡೆದುಕೊಂಡಿತು.ರಾಜ್ಯ ಫುಟ್‌ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯಲ್ಲಿ ಶಿಲ್ಲಾಂಗ್‌ನ ಲ್ಯಾಂಗ್‌ಸ್ನಿಂಗ್ ಏಳು ಅಂಕಗಳನ್ನು ಪಡೆದು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಶುಕ್ರವಾರ ನಡೆದ ಪಂದ್ಯದಲ್ಲಿ ಲ್ಯಾಂಗ್‌ಸ್ನಿಂಗ್ 4-2ಗೋಲುಗಳಿಂದ ರಂಗ್‌ದೇಜಿದ್ ಯುನೈಟೆಡ್ ಕ್ಲಬ್ ಎದುರು ಗೆಲುವು ಸಾಧಿಸಿತು.ವಿಜಯಿ ತಂಡದ ಜೊಯೆಲ್ 40ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರೆ, ಇದೇ ಆಟಗಾರ 86ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಎರಡನೇ ಗೋಲು ತಂದಿತ್ತರು. ಉಳಿದ ಗೋಲುಗಳನ್ನು ಡೇನಿಯಲ್ 62 ಮತ್ತು 79ನೇ ನಿಮಿಷದಲ್ಲಿ ಗಳಿಸಿದರು. ಎರಡನೇ ಲೆಗ್ ಏ. 15ರಂದು ಆರಂಭವಾಗಲಿದೆ.ಮೊದಲ ಲೆಗ್‌ನ ಪಾಯಿಂಟ್ ಪಟ್ಟಿ: ಮಹಮ್ಮಡನ್ ಸ್ಪೋರ್ಟಿಂಗ್ (10 ಅಂಕ), ಮುಂಬೈ ಟೈಗರ್ಸ್ (9), ಭಾವನಿಪುರೆ ಕ್ಲಬ್ (9), ಲ್ಯಾಂಗ್‌ಸ್ನಿಂಗ್ ಕ್ಲಬ್ (7), ರಂಗದೇಜಿದ್ (4) ಮತ್ತು ಸದರ್ನ್ ಸಮಿತಿ (2).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry