ಅಗ್ರಸ್ಥಾನ ಹಂಚಿಕೊಂಡ ರೀಶಾ

7

ಅಗ್ರಸ್ಥಾನ ಹಂಚಿಕೊಂಡ ರೀಶಾ

Published:
Updated:

ಮಂಗಳೂರು: ಕರ್ನಾಟಕದ ರೀಶಾ ಶೆಣೈ, ಚೆಸ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ನಡೆಯುತ್ತಿರುವ ರಾಷ್ಟ್ರೀಯ 14 ವರ್ಷದೊಳಗಿನವರ ಚೆಸ್ ಟೂರ್ನಿಯ ಬಾಲಕಿಯರ ವಿಭಾಗದ ಎರಡನೇ ಸುತ್ತಿನ ನಂತರ ಇತರ ನಾಲ್ವರು ಆಟಗಾರ್ತಿಯರ ಜತೆ ತಲಾ 2 ಪಾಯಿಂಟ್ಸ್ ಸಂಗ್ರಹಿಸಿ ಮುನ್ನಡೆ ಹಂಚಿಕೊಂಡಿದ್ದಾರೆ.ನಗರದ ಡೆರಿಕ್ಸ್ ಚೆಸ್ ಸ್ಕೂಲ್ ಆಶ್ರಯದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಸೋಮವಾರ, 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಕರ್ನಾಟಕ ಅರ್ಜುನ್ ಅಡಪ್ಪ, ಅನಿಶ್ಚರಿತ್, ಆದಿತ್ಯ ಶೆಟ್ಟಿ, ಅಖಿಲ್ ಆರ್.ಎಂ. ಸೇರಿದಂತೆ ಒಟ್ಟು 12 ಮಂದಿ ಮುನ್ನಡೆ ಸಾಧಿಸಿದ್ದಾರೆ.10 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ 9 ಮಂದಿ ಮುನ್ನಡೆ ಸಾಧಿಸಿದ್ದು, ರಾಜ್ಯದ ಅನುತ್ತಮ ಎ., ಚೈತನ್ಯಶಾಮ್ ಒಳಗೊಂಡಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ಇಶಾನಿ, ರೈ, ಮಾನಸಾ ಕಾರಂತ್, ಕ್ಷಮಾ ಆಚಾರ್ಯ ಮುನ್ನಡೆ ಸಾಧಿಸಿದವರಲ್ಲಿ ಒಳಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry