ಬುಧವಾರ, ಏಪ್ರಿಲ್ 14, 2021
29 °C

ಅಗ್ರಿಮಾರ್ಟ್‌ಗೆ `ರಿಟೇಲರ್' ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಗ್ರಿಮಾರ್ಟ್ ಅಧ್ಯಕ್ಷ ಎಸ್.ಎ.ವಾಸುದೇವಮೂರ್ತಿ ಅವರಿಗೆ `ಫ್ರಾಂಚೈಸಿಂಗ್ ವರ್ಡ್' ಜೀವಮಾನ ಸಾಧನೆಗೆ ನೀಡುವ `ಸ್ಟಾರ್ ರಿಟೇಲರ್ ಪ್ರಶಸ್ತಿ'ಯನ್ನು ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನೀಡಿ ಗೌರವಿಸಲಾಯಿತು.ಕೃಷಿ ಮತ್ತು ಉದ್ಯಾನವನ ಕೆಲಸಗಳಿಗೆ ಬಳಸುವ ಉಪಕರಣಗಳ ಮಾರಾಟ ಕಂಪೆನಿ `ರತ್ನಗಿರಿ ಇಂಪೆಕ್ಸ್ ಪ್ರೈ.ಲಿ.'ನ ಅಂಗಸಂಸ್ಥೆಯಾದ ಅಗ್ರಿಮಾರ್ಟ್, ಕೃಷಿಯಂತ್ರ ನಿರ್ವಹಣೆಗೆ ಅವಶ್ಯಕವಾದ ತರಬೇತಿಯನ್ನು ಗ್ರಾಮೀಣ ಯುವಜನರಿಗೆ ನೀಡುತ್ತಿದೆ.ಈಗ ಈ ಪ್ರಶಸ್ತಿ ಬಂದಿರುವುದು ಕೃಷಿ ಯಾಂತ್ರೀಕರಣ ಕ್ಷೇತ್ರದಲ್ಲಿ ಇನ್ನಷ್ಟು ಹೆಚ್ಚು ಕೆಲಸ ಮಾಡುವಂತೆ ನಮ್ಮನ್ನು ಉತ್ತೇಜಿಸಿದಂತಾಗಿದೆ ಎಂದು ಎಸ್.ಎ.ವಾಸುದೇವಮೂರ್ತಿ ಪ್ರತಿಕ್ರಿಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.