ಅಘನಾಶಿನಿಯಲ್ಲಿ ಕೋಳಿ ತ್ಯಾಜ್ಯ, ಬಿಯರ್ ಡಬ್ಬ

7

ಅಘನಾಶಿನಿಯಲ್ಲಿ ಕೋಳಿ ತ್ಯಾಜ್ಯ, ಬಿಯರ್ ಡಬ್ಬ

Published:
Updated:

ಕುಮಟಾ: ಬ್ರಿಟಿಷರ ಕಾಲದಲ್ಲಿ ಪ್ರಮುಖ ವ್ಯಾಪಾರಿ ಕೇಂದ್ರ ಎನಿಸಿ ಕೊಂಡಿದ್ದ ಉಪ್ಪಿನಪಟ್ಟಣ ಧಕ್ಕೆಯ ಅಘನಾಶಿನಿ ನದಿಯ ದಂಡೆಯ ಪ್ರದೇಶ ಈಗ ಕೋಳಿ ತ್ಯಾಜ್ಯ, ಮದ್ಯದ ಡಬ್ಬಿ ಯನ್ನು ಎಸೆಯುವ ಕಸದ ತೊಟ್ಟಿ ಯಂತಾಗಿದೆ.

ಸಮೀಪದ ಕತಗಾಲದ ಕೋಳಿ ಅಂಗಡಿಯವರು ರಾತ್ರಿ ಹೊತ್ತು ಇಲ್ಲಿಯ ತಾರಿ ಹತ್ತಿರ ಅಘನಾಶಿನಿ ನದಿಯಲ್ಲಿ ಅಲ್ಲಲ್ಲಿ ಕೋಳಿ ತ್ಯಾಜ್ಯ, ಬಿಯರ್ ಡಬ್ಬಗಳನ್ನು ಎಸೆದು ಹೋಗು ತ್ತಿದ್ದಾರೆ ಎಂದು ಸ್ಥಳೀಯರು ಆರೋಪಿ ಸುತ್ತಿದ್ದಾರೆ.ಹಗಲು ಹೊತ್ತು  ಕೋಳಿ ತ್ಯಾಜ್ಯ ವನ್ನು ನದಿಯಲ್ಲಿ ಎಸೆಯುವಾಗ ಜನರು ನೋಡುತ್ತಾರೆ ಎಂದು ರಾತ್ರಿ ಹೊತ್ತು ಎಸೆಯಲಾಗುತ್ತದೆ.ಇದರಿಂದ ನಿತ್ಯ ಇಲ್ಲಿ  ದೋಣಿ ಮೂಲಕ ಅಘನಾಶಿನಿ ನದಿ ದಾಟಿ ಉಪ್ಪಿನಪಟ್ಟಣ, ಬೊಗರಿ ಬೈಲ್, ಕಲ್ಲಬ್ಬೆ, ಕುಡುವಳ್ಳಿ ಮುಂತಾದ ಗ್ರಾಮ ಗಳಿಗೆ ಹೋಗುವವರಿಗೆ ತುಂಬಾ ಕಿರಿ ಕಿರಿಯಾಗುತ್ತದೆ.ಪ್ರಮುಖ ಬಂದರು: ಬ್ರಿಟಿಷ ಕಾಲದಿಂದ ಸುಮಾರು 40 ವರ್ಷಗಳ ಈಚಿನವರೆಗೆ ಉಪ್ಪಿನಪಟ್ಟಣ ಧಕ್ಕೆ ಪ್ರಮುಖ ವ್ಯಾಪಾರಿ ಕೇಂದ್ರವಾಗಿತ್ತು. ಯಾಣದ ಭೈರವೇಶ್ವರನ ಜಡೆಯಿಂದ ಹರಿದು ಬಂದ ಗಂಗೆ ಚಂಡಿಕಾ ಹೊಳೆಯ ಹೆಸರಲ್ಲಿ ಅಘನಾಶಿನಿ ನದಿ ಯನ್ನು ಸೇರುವ ನಯನಮನೋಹರ ಸಂಗಮ ಸ್ಥಳವೂ ಇದಾಗಿದೆ. ಹಿಂದೆಲ್ಲ ಹೊರ ದೇಶಗಳಿಗೆ ರಫ್ತಾಗುವ ಕಟ್ಟಿಗೆ, ಸಾಂಬಾರು ಪದಾರ್ಥ, ಹತ್ತಿ ಮುಂತಾದ ವಸ್ತುಗಳನ್ನು ಉಪ್ಪಿನ ಪಟ್ಟಣ ಧಕ್ಕೆಯಿಂದ ದೊಡ್ಡ ದೊಡ್ಡ ಮಚವೆಗಳ ಮೂಲಕ ಕಳಿಸಲಾಗು ತ್ತಿತ್ತು.ಘಟ್ಟ ಪ್ರದೇಶಗಳಿಂದ ಹೊನ್ನಾವರ, ಭಟ್ಕಳ ಬಂದರುಗಳಿಗೆ ಹೋಗುವ ವಸ್ತುಗಳು ಇಲ್ಲಿಂದಲೇ ಮುಂದೆ ಅಘನಾಶಿನಿ ದಾಟಿ ಹೊನ್ನಾವರ- ಕತಗಾಲ ರಸ್ತೆ ಮೂಲಕ ಎತ್ತಿನಾಗಡಿ ಯಲ್ಲಿ ಸಾಗುತ್ತಿದ್ದವು.  ಎಲ್ಲ ಯಕ್ಷಗಾನ ಮೇಳದವರಿಗೆ ಯಕ್ಷಗಾನ ಪ್ರದರ್ಶನಕ್ಕೆ ಅನುಕೂಲವಾಗುವಂತೆ ಇಲ್ಲಿ ಉತ್ತಮ ಮೈದಾನವಿತ್ತು.

 

ಅಘನಾಶಿನಿ ನದಿಯಲ್ಲಿ ಸ್ನಾನ ಮಾಡಲು, ಬಟ್ಟೆ ಒಗೆಯಲು ನಿಸರ್ಗ ನಿರ್ಮಿತ ಅತ್ಯುತ್ತಮ ವ್ಯವಸ್ಥೆ ಕೂಡ ಇಲ್ಲಿತ್ತು. ಕೆಲ ತಿಂಗಳ ಕಾಲ ಇಲ್ಲಿಯ ನೀರನ್ನು ಕುಡಿಯುವುದಕ್ಕೂ ಬಳಸು ತ್ತಿದ್ದರು. ಮೀನುಗಾರರು ಇಲ್ಲಿಯೇ ಬಿಡಾರ ಹೂಡಿ ತಾಜಾ ಮೀನು ಹಿಡಿದು ಊರಿನವರಿಗೆ ಮಾರುತ್ತಿದ್ದರು.ನಿತ್ಯ ನೂರಾರು ಜನ ಇಲ್ಲಿ ಕೆಲಸ ಮಾಡುತ್ತಿದ್ದರು. ನೂರಾರು ಎತ್ತಿನ ಗಾಡಿಗಳು, ಹತ್ತಾರು ವಾಹನಗಳು ಓಡಾಡುತ್ತಿದ್ದವು. ಅಂಗಡಿ ಮುಂಗಟು ಗಳು, ಗೋದಾಮು, ಮೀನು ಮಾರು ಕಟ್ಟೆ ಎಲ್ಲ ಸೇರಿ ಉಪ್ಪಿನಪಟ್ಟಣ ಧಕ್ಕೆ ಒಂದು ವ್ಯಾಪಾರಿ ಕೇಂದ್ರವಾಗಿತ್ತು. ಕ್ರಮೇಣ ಸಾರಿಗೆ ವ್ಯವಸ್ಥೆಯಲ್ಲಿ ಉಂಟಾದ ಕ್ರಾಂತಿ ಈ ಧಕ್ಕೆಯ ವೈಭವ ಇತಿಹಾಸ ಪುಟ ಸೇರುವಂತಾದವು.ಆದರೂ ಅತ್ಯಂತ ಸುಂದರ, ಸ್ವಚ್ಛ ಪರಿಸರಕ್ಕೆ ಹೆಸರಾದ ಈ ಭಾಗದಲ್ಲಿ ಎರಡು ಮೂರು ಕಡೆ ನದಿಯಲ್ಲಿ ಕೋಳಿ ತ್ಯಾಜ್ಯ ಎಸೆಯುವುದರಿಂದ ನದಿ ಪಕ್ಕದ ಕೆಲ ಮನೆಗಳವರು ನದಿಯ ನೀರನ್ನು ಕುಡಿಯುವುದಕ್ಕೆ, ಬಟ್ಟೆ ಒಗೆಯುವುದಕ್ಕೆ ಬಳಸುವುದನ್ನು ನಿಲ್ಲಿಸಿದ್ದಾರೆ. ನದಿ ಯಲ್ಲಿನ ಮೀನುಗಳೂ ಕೋಳಿ ತ್ಯಾಜ್ಯ ತಿಂದು ಸಾಯುವ ಸಾಧ್ಯತೆಗಳಿವೆ. ಒಂದು ಊರಿನಿಂದ ಇನ್ನೊಂದು ಊರಿಗೆ ದೋಣಿ ಮೂಲಕ ನದಿ ದಾಟುವವರು ಮೂಗು ಮುಚ್ಚಿಕೊಳ್ಳು ವಂಥ ಪರಿಸ್ಥಿತಿ ಉಂಟಾಗಿದೆ.ಅಳಕೋಡ ಪಂಚಾಯತಿ ವ್ಯಾಪ್ತಿಗೆ ಸೇರುವ ಉಪ್ಪಿನಪಟ್ಟಣ ಧಕ್ಕೆಯಲ್ಲಿ ಜನರಿಗೆ ಪಂಚಾಯತಿವತಿಯಿಂದ ಯಾವ ಕನಿಷ್ಠ ಸೌಲಭ್ಯವನ್ನೂ ಕಲ್ಪಿಸಿಲ್ಲ. ನದಿಯಲ್ಲಿ ಕೋಳಿ ತ್ಯಾಜ್ಯ, ಮದ್ಯ ಬಾಟಲಿ ಎಸೆಯುವ ಬಗ್ಗೆ ಪಂಚಾ ಯಿತಿಗೆ ದೂರಿದರೂ ಇದುವರೆಗೂ ಯಾವುದೇ ಕ್ರಮ ಜರುಗಿಲ್ಲ. ಕೋಳಿ ತ್ಯಾಜ್ಯ ಹಾಗೂ ಬಿಯರ್ ಡಬ್ಬಗಳನ್ನು ನದಿಯಲ್ಲಿ ಎಸೆಯುವ ಬಗ್ಗೆ  ಸ್ಥಳೀಯ ಪೊಲೀಸರು, ಅಬಕಾರಿ ಇಲಾಖೆ ಅಥವಾ ಅಂದಾಯ ಇಲಾಖೆಯ ಅಧಿಕಾರಿಗಳು ತಕ್ಷಣ ಕ್ರಮ ಕೈಕೊಳ್ಳ ಬೇಕಾಗಿದೆ~ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry