ಶನಿವಾರ, ಏಪ್ರಿಲ್ 17, 2021
32 °C

ಅಘನಾಶಿನಿಯಿಂದ ಉಸುಕು ಅಕ್ರಮ ಸಾಗಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಮಟಾ: ತಾಲ್ಲೂಕಿನ ದೀವಗಿ, ತಾರಿಬಾಗಿಲು ಹಾಗೂ ಸುತ್ತಮುತ್ತ ಅಘನಾಶಿನಿ ನದಿಯಿಂದ ಅನಧಿಕೃತವಾಗಿ ಉಸುಕು ತೆಗೆದು ಮಾರಾಟ ಮಾಡುವ ವ್ಯವಹಾರ ಅವ್ಯಾಹತವಾಗಿ ಸಾಗುತ್ತಿದೆ.ಅಘನಾಶಿನಿ ನದಿಯಲ್ಲಿ ಬೇಸಿಗೆಯಲ್ಲಿ ಜೀವನೋಪಾಯಕ್ಕಾಗಿ ಕೆಲವರು ನೀರಿನಲ್ಲಿ ಮುಳುಗಿ ಉಸುಕು ತೆಗೆದು ಮಾರಾಟ ಮಾಡಿದರೆ, ಅದನ್ನೇ ದೊಡ್ಡ ಉದ್ಯಮವಾಗಿಸಿಕೊಂಡ ಕೆಲವರು ದೊಡ್ಡ ದೊಡ್ಡ ದೋಣಿಗಳಲ್ಲಿ ಯಂತ್ರಗಳನ್ನು ಬಳಸಿ ಅನಧಿಕೃತವಾಗಿ ಉಸುಕು ತೆಗೆದು ಲಾರಿಗಳಲ್ಲಿ ಬೇರೆ ಬೇರೆ ಊರುಗಳಿಗೆ ಮಾರಾಟ ಮಾಡುವ ವ್ಯವಹಾರ ನಡೆಸಿದ್ದಾರೆ. ದೀವಗಿ ಬಳಿ ಅಘನಾಶಿನಿ ನದಿ ಸೇತುವೆಯ ಎರಡೂ ಬದಿಗೆ ಅನಧಿಕೃತವಾಗಿ ತೆಗೆದ  ಉಸುಕನ್ನು ದೋಣಿಯಿಂದ ಕೆಳಗಿಳಿಸಿ ಸಂಗ್ರಹಿಸುವ ದೃಶ್ಯ ಸಾಮಾನ್ಯವಾಗಿದೆ.`ದೀವಗಿ ಸುತ್ತ ಅಘನಾಶಿನಿ ನದಿಯಲ್ಲಿ ಉಸುಕು ತೆಗೆಯಲು ಯಾರಿಗೂ ಪರವಾನಗಿ ನೀಡಿಲ್ಲ. ಆದರೆ ಕೆಲವರು ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮೊನ್ನೆ ದೀವಗಿ ಬಳಿ ಅನಧಿಕೃತವಾಗಿ ಉಸುಕು ಸಾಗಿಸುತ್ತಿದ್ದ ಆರು ಲಾರಿಗಳನ್ನು ತಡೆದು ತಲಾ ಒಂದಕ್ಕೆ 30 ಸಾವಿರ ರೂಪಾಯಿ ದಂಡ ಹಾಕಲಾಗಿದೆ.`ಈ ಕೆಲಸವನ್ನು ಗಣಿ ಮತ್ತುಭೂ ವಿಜ್ಞಾನ ಇಲಾಖೆ  ಮತ್ತು ಲೋಕೋಪಯೋಗಿ ಇಲಾಖೆಯವರು ಮಾಡಬೇಕಾಗಿದೆ~ ಎಂದು ಕುಮಟಾ ಸಹಾಯಕ ಕಮಿಷನರ್ ಅನುರಾಧಾ  ತಿಳಿಸಿದರು.`ಮಂಗಳವಾರ ಹಿಂದೆ ಉಡುಪಿ ಕಡೆಯಿಂದ ಪುಣೆಗೆ ಸಾಗಿಸುತ್ತಿದ್ದ ಮೂರು ಉಸುಕಿನ ಲಾರಿಗಳನ್ನು ತಡೆದು ತಲಾ ಒಂದಕ್ಕೆ 38 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ~ ಎಂದು ಕುಮಟಾ ಪಿ.ಎಸ್.ಐ. ಆಂಜನೇಯ ತಿಳಿಸಿದ್ದಾರೆ. ಅಘನಾಶಿನಿ ನದಿಯಲ್ಲಿ ಅನಧಿಕೃತವಾಗಿ ಉಸುಕು ತೆಗೆಯದಂತೆ ಕ್ರಮ ವಹಿಸಲು ಇತ್ತೀಚೆಗೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಭೆಯನ್ನು ನಡೆಸಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.