ಶನಿವಾರ, ಏಪ್ರಿಲ್ 17, 2021
31 °C

ಅಚ್ಚಪ್ಪನಕೊಪ್ಪಲು ಶಾಲೆಯಲ್ಲಿ ಎಜುಸ್ಯಾಟ್ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ತಾಲ್ಲೂಕಿನ ಅಚ್ಚಪ್ಪನಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಜುಸ್ಯಾಟ್ (ಉಪಗ್ರಹ ಆಧಾರಿತ ಶಿಕ್ಷಣ) ಕಾರ್ಯಕ್ರಮ ಬುಧವಾರ ಆರಂಭವಾಯಿತು.ಉದ್ಯಮಿ ಜಗನ್ನಾಥ ಶೆಣೈ ಎಜುಸ್ಯಾಟ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಗ್ರಾಮೀಣ ಮಕ್ಕಳಲ್ಲಿ ಅಗಾಧ ಪ್ರತಿಭೆ ಇದೆ. ಅದನ್ನು ಬೆಳಕಿಗೆ ತರುವ ಕೆಲಸ ಆಗಬೇಕು. ಶಿಕ್ಷಕರು ಪಠ್ಯ ಪುಸ್ತಕದ ವಿಷಯಗಳನ್ನು ಕಲಿಸುವುದಕ್ಕೆ ಮಾತ್ರ ಸೀಮಿತ ಆಗಬಾರದು. ಇಂದಿನ ಅಗತ್ಯತೆಗಳಿಗೆ ಪೂರಕವಾದ ಶಿಕ್ಷಣ ಕೊಡಬೇಕು ಎಂದು ಹೇಳಿದರು.ರಂಗ ಕೌಮುದಿ ಪ್ರತಿಷ್ಠಾನದ ಅಧ್ಯಕ್ಷ ಗ.ನಾ.ಭಟ್ಟ ಮಾತನಾಡಿ, ಈಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉತ್ತಮ ಸವಲತ್ತುಗಳು ಸಿಗುತ್ತಿವೆ. ಅವುಗಳ ಸದ್ಬಳಕೆ ಆಗಬೇಕು ಎಂದರು.ಉಪಗ್ರಹ ಆಧಾರಿತ ಶಿಕ್ಷಣದಿಂದ ವಿದ್ಯಾರ್ಥಿಗಳ ಶೈಕ್ಷಣಕ ಗುಣಮಟ್ಟ ವೃದ್ಧಿಸಲಿದೆ. ಈ ಕಾರ್ಯಕ್ರಮದ ಬಗ್ಗೆ ಶಿಕ್ಷಕರು ಕಲಿತು ನಂತರ ವಿದ್ಯಾರ್ಥಿಗಳಿಗೆ ಕಲಿಸಬೇಕು ಎಂದರು. ಪುಸ್ತಕ ಪ್ರೇಮಿ ಅಂಕೇಗೌಡ ವಾಚನಾಲಯ ಉದ್ಘಾಟಿಸಿ ಮಾತನಾಡಿ, ಶಾಲೆಯ ಗ್ರಂಥಾಲಕ್ಕೆ 50 ಉತ್ತಮ ಪುಸ್ತಕಗಳನ್ನು ಕೊಡುವ ಭರವಸೆ ನೀಡಿದರು.ನವಕರ್ನಾಟಕ ಪುಸ್ತಕ ಪ್ರಕಾಶನದ ಮೈಸೂರು ಶಾಖೆ ವ್ಯವಸ್ಥಾಪಕ ಸತ್ಯನಾರಾಯಣ, ಡಯಟ್ ಪ್ರಾಂಶುಪಾಲೆ ಸುಮಂಗಲಿ, ಸಂಪನ್ಮೂಲ ಶಿಕ್ಷಕ ಲೋಕೇಶ್ ಮಾತನಾಡಿದರು. ಮುಖ್ಯ ಶಿಕ್ಷಕಿ ಕೆ.ವಸಂತ, ಗೀತಾ ಹೆಗಡೆ, ಲಲಿತ ಕುಮಾರಿ, ಎಸ್‌ಡಿಎಂಸಿ ಅಧ್ಯಕ್ಷೆ ಮಂಜುಳಾ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.