ಶನಿವಾರ, ಮೇ 8, 2021
26 °C

ಅಚ್ಚರಿಗಳ `ಗೂಗ್ಲಿ'

ಚಿತ್ರ: ಕೆ.ಎನ್.ನಾಗೇಶ್‌ಕುಮಾರ್ Updated:

ಅಕ್ಷರ ಗಾತ್ರ : | |

ಚಿತ್ರತಂಡದ ಪ್ರಕಾರ `ಗೂಗ್ಲಿ' ಎಂದರೆ ಅಚ್ಚರಿ! ಚಿತ್ರರಂಗದ ಪಾಲಿಗೆ ಅಂದು ಅಚ್ಚರಿಯ ದಿನವೇ ಸರಿ. ಯಾವ ಕಾರ್ಯಕ್ರಮಕ್ಕೂ ನಿಗದಿತ ಸಮಯಕ್ಕೆ ಬಂದರವಲ್ಲ ನಟ ಅಂಬರೀಷ್. ಆದರೆ ಸಚಿವ ಹುದ್ದೆ ಅಲಂಕರಿಸಿದ ಜವಾಬ್ದಾರಿಯ ಕಾರಣಕ್ಕೋ, ತಮ್ಮ ತಾತನ ಹೆಸರಿನ ಸಭಾಂಗಣದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಎಂಬ ಪ್ರೀತಿಯ ಕಾರಣಕ್ಕೋ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ನಡೆದ `ಗೂಗ್ಲಿ' ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಅವರು ಸಮಯಕ್ಕೆ ಸರಿಯಾಗಿ ಹಾಜರಿದ್ದರು. ತಡವಾಗಿ ಬಂದ ನಾಯಕನಟ ಯಶ್ ಅವರನ್ನು ತರಾಟೆಗೂ ತೆಗೆದುಕೊಂಡರು.ಬಿಡುವಿಲ್ಲದ ಕೆಲಸದ ನಡುವೆಯೂ ನಿರ್ಮಾಪಕ ಜಯಣ್ಣ ಮತ್ತು ನಟ ಯಶ್ ಅವರ ಒತ್ತಾಯದ ಕಾರಣಕ್ಕೆ ಆಗಮಿಸಿದ್ದ ಅಂಬರೀಷ್, ಸೀಡಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. `ಗೂಗ್ಲಿ'- ಗೂಗ್ಲಿ ಚೆಂಡಿನಂತೆ ಅಪ್ಪಳಿಸಲಿ ಎಂಬ ಹಾರೈಕೆ ಅವರದು.ಹೊರಗೆ ಮಳೆ, ಒಳಗೆ ಕತ್ತಲನ್ನು ಸೀಳುವ ವರ್ಣರಂಜಿತ ಬೆಳಕಿನಾಟದಲ್ಲಿ ಹಾಡು ನೃತ್ಯದ ವರ್ಷಧಾರೆ. ಅಂದು ಚೌಡಯ್ಯ ಸಭಾಂಗಣ ಹೊಸ ಮೆರುಗು ಪಡೆದಿತ್ತು. `ಮಿಲೆ ಸುರ್...' ಗೀತೆಗೆ ಪ್ರಹ್ಲಾದ ಆಚಾರ್ಯ ಅವರ ನೆರಳು ನೃತ್ಯ ಪ್ರದರ್ಶನ ಗಮನ ಸೆಳೆಯಿತು. `ಗೂಗ್ಲಿ'ಯ ಮೂರು ಹಾಡುಗಳನ್ನು ನಿರ್ದೇಶಕ ಪವನ್ ಒಡೆಯರ್ ಹಾಡುಗಳನ್ನು ಬರೆದಿದ್ದು, ಅದರಲ್ಲಿ ಎರಡು ಹಾಡುಗಳನ್ನು ಅವರೇ ಹಾಡಿದ್ದಾರೆ. ಜಯಂತ ಕಾಯ್ಕಿಣಿ, ಯೋಗರಾಜ್ ಭಟ್ ಮತ್ತು ಕವಿರಾಜ್ ತಲಾ ಒಂದು ಹಾಡು ರಚಿಸಿದ್ದಾರೆ.`ಗೂಗ್ಲಿ'ಗೆ ಮಟ್ಟು ಹಾಕಿದ ಜೋಶ್ವ ಶ್ರೀಧರ್ ಗೈರುಹಾಜರಾಗಿದ್ದರು. ಹರಿಕೃಷ್ಣ ಅವರ `ದಿ ಬೀಟ್ಸ್' ಆಡಿಯೊ ಕಂಪೆನಿ ಹಾಡುಗಳನ್ನು ಹೊರತಂದಿದೆ. ನಿರ್ದೇಶಕ ಯೋಗರಾಜ್ ಭಟ್, ನಟಿ ಕೃತಿ ಕರಬಂಧ, ನಿರ್ಮಾಪಕರಾದ ಜಯಣ್ಣ ಮತ್ತು ಭೋಗೇಂದ್ರ ಕಾರ್ಯಕ್ರಮದಲ್ಲಿ ಹಾಜರಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.