ಅಜಯ್‌, ಲವ್‌ ಮತ್ತು ಸೆಕೆಂಡ್ ಹ್ಯಾಂಡ್...

7

ಅಜಯ್‌, ಲವ್‌ ಮತ್ತು ಸೆಕೆಂಡ್ ಹ್ಯಾಂಡ್...

Published:
Updated:
ಅಜಯ್‌, ಲವ್‌ ಮತ್ತು ಸೆಕೆಂಡ್ ಹ್ಯಾಂಡ್...

‘ನನ್ನ ಬಹುಪಾಲು ಚಿತ್ರಗಳಲ್ಲಿ ನನಗೆ ನಾಯಕಿ ಒಲಿಯುವುದೇ ಇಲ್ಲ. ಇಲ್ಲಿಯೂ ಸೆಕೆಂಡ್‌ ಹ್ಯಾಂಡ್‌ ಲವ್‌’ ಎಂದು ನಗುನಗುತ್ತಲೇ ಹೇಳಿದರು ನಟ ಅಜಯ್‌ ರಾವ್‌. ಅವರು ನಿಜ ಜೀವನದಲ್ಲಿ ಹಲವು ಹುಡುಗಿಯರನ್ನು ಪ್ರೀತಿಸಿದ್ದರೂ ಯಾರಲ್ಲೂ ಪ್ರೇಮ ನಿವೇದನೆ ಮಾಡಿಕೊಂಡಿಲ್ಲವಂತೆ.ಹೀಗೆ ಅಜಯ್‌ ಅವರ ಪ್ರೇಮದ ಕಥೆ–ವ್ಯಥೆ ತೆರೆದುಕೊಂಡಿದ್ದು ‘ಎ ಸೆಕೆಂಡ್‌ ಹ್ಯಾಂಡ್‌ ಲವರ್‌’ ಚಿತ್ರದ ಮುಹೂರ್ತ ಕಾರ್ಯಕ್ರಮದ ಸಂದರ್ಭದಲ್ಲಿ. ಮೊದಲ ಪ್ರೇಮ ಭಗ್ನಗೊಂಡು ಎರಡನೇ ಹುಡುಗಿಗೆ ಪ್ರೇಮ ನಿವೇದಿಸುವ ಕಥೆ ‘ಸೆಕೆಂಡ್‌ ಹ್ಯಾಂಡ್‌...’ ಚಿತ್ರದ್ದು. ನಮ್ಮ ಸುತ್ತಮುತ್ತಲಿನ ಘಟನೆಗಳು ಮತ್ತು ಇಂದಿನ ಯುವ ಮನಸ್ಸುಗಳ ಕುದಿ ಹೃದಯಗಳು ಪ್ರೇಮಕ್ಕಾಗಿ ಹಾತೊರೆಯುವುದೇ ಕಥೆಯ ವಸ್ತು.‘ಮೊದಲ ಪ್ರೀತಿ ಗಂಭೀರವಾಗಿರುತ್ತದೆ, ಜೀವನ ಪೂರ್ತಿ ಕಾಡುತ್ತದೆ’ ಎನ್ನುತ್ತಲೇ ಎರಡನೇ ಪ್ರೀತಿಯ ಹುಟ್ಟನ್ನು ರಟ್ಟು ಮಾಡಿದರು ಸೆಕೆಂಡ್‌ ಹ್ಯಾಂಡ್‌ ಲವರ್‌. ರಾಕ್‌ ಸ್ಟಾರ್‌ ಆಗುವ ಆಸೆ ಹೊತ್ತು ಸಾಗುವ ಪಾತ್ರ ಅವರದ್ದು. ಚಿತ್ರದ ಮೂಲಕ ಹೊಸ ಟ್ರೆಂಡ್‌ ಸೃಷ್ಟಿಸುವ ಭರವಸೆ ಹೊತ್ತಿದ್ದಾರಂತೆ ಅಜಯ್‌. ಯಾವ ರೀತಿಯ ಟ್ರೆಂಡ್‌ ಎನ್ನುವುದನ್ನು ಮಾತ್ರ ಅವರು ಹೇಳಲಿಲ್ಲ. ಅಂತಿಮವಾಗಿ ತಮ್ಮ ಇತ್ತೀಚಿನ ಚಿತ್ರ ಜೀವನವನ್ನೂ ಅವರು ಮೆಲುಕು ಹಾಕಿದರು.ನಾಯಕ ಸಂಗೀತಗಾರನಾದ ಕಾರಣ ಚಿತ್ರದಲ್ಲಿ ಸಂಗೀತದ ಸ್ಪರ್ಶ ಹೆಚ್ಚಿದೆ. ಆರು ಹಾಡುಗಳು ಮತ್ತು ನಾಲ್ಕು ಬಿಟ್‌ಗಳಿವೆ. ನಾಯಕ ಸೆಕೆಂಡ್‌ ಹ್ಯಾಂಡ್‌ ಲವರ್‌ ಆದ್ದರಿಂದ ಸಹಜವಾಗಿ ಇಬ್ಬರು ನಾಯಕಿಯರು. ಅವರ ಆಯ್ಕೆಯೂ ಶೀಘ್ರ ಪೂರ್ಣವಾಗಲಿದೆಯಂತೆ.ಅಕ್ಟೋಬರ್‌ ಎರಡನೇ ವಾರದಿಂದ ಚಿತ್ರೀಕರಣ ಆರಂಭ. ಮೂರೂವರೆ ಕೋಟಿ ರೂಪಾಯಿಯಲ್ಲಿ ಚಿತ್ರ ನಿರ್ಮಿಸುವ ಅಂದಾಜು ನಿರ್ದೇಶಕ ರಾಘವ ಲೋಕಿ ಅವರದ್ದು. ರಂಗಾಯಣ ರಘು, ಅವಿನಾಶ್, ಸಾಧುಕೋಕಿಲ ಮತ್ತಿತರರು ಚಿತ್ರದಲ್ಲಿ ನಟಿಸಲಿದ್ದಾರೆ.ನಿರ್ಮಾಪಕ ಮಂಜುನಾಥ್‌, ಸಂಗೀತ ನಿರ್ದೇಶಕ ಗುರುಕಿರಣ್‌ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry